ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ ಆಗಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್‍ವುಡ್ ಕೆಲ ಯುವ ನಟಿ-ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಇಂದ್ರಜಿತ್‍ಗೆ ನೋಟಿಸ್ ನೀಡಿದ್ದರು. ಆದರೆ ಇಂದ್ರಜಿತ್ ಅವರು ಮಾಹಿತಿ ಮಾತ್ರ ನೀಡಿ ಸೂಕ್ತ ದಾಖಲೆಗಳನ್ನು ನೀಡರಲಿಲ್ಲ. ಈಗ ವಿಚಾರಣೆಗೆ ಮತ್ತೆ ಹಾಜರಾಗಿರುವ ಇಂದ್ರಜಿತ್ ಇಂದು ಕೂಡ ಕೇವಲ ಮಾಹಿತಿ ನೀಡಿ ದಾಖಲೆ ನೀಡಿಲ್ಲ.
Advertisement
Advertisement
ಇಂದರಿಂದ ಬೇಸರಗೊಂಡ ಸಿಸಿಬಿ ಪೊಲೀಸರು, ಇಂದ್ರಜಿತ್ ಡ್ರಗ್ಸ್ ಮಾಫಿಯಾ ಬಗ್ಗೆ ನೀವು ಸೂಕ್ತ ದಾಖಲೆ ಕೊಟ್ಟಿಲ್ಲ. ಸುಮ್ಮನೆ ಪ್ರಚಾರ ಗಿಟ್ಟಿಸೋಕೆ ಈ ರೀತಿ ಮಾಡ್ತಿದ್ದಾರೆ ಅನ್ನಿಸುತ್ತಿದೆ. ಮಾಧ್ಯಮಗಳ ಮುಂದೆ ಹೋಗಿ ಎಲ್ಲ ದಾಖಲೆ ಸಮೇತ ಸಾಕ್ಷಿ ಕೊಟ್ಟಿದ್ದೀನಿ ಅಂತ ಹೇಳುತ್ತಿದ್ದೀರಾ. ಆದರೆ ಆ ರೀತಿಯ ಪ್ರತ್ಯಕ್ಷ ಹಾಗೂ ತನಿಖೆಗೆ ಸಹಕಾರಿಯಾಗುವ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ ಎಂದು ವಿಚಾರಣೆ ವೇಳೆ ಅಧಿಕಾರಿಗಳು ಗರಂ ಆಗಿದ್ದಾರೆ.
Advertisement
Advertisement
ಇದೇ ವೇಳೆ ಇಂದ್ರಜಿತ್ ಅವರು, ನೀವು ಮಾಹಿತಿ ಶೇರ್ ಮಾಡುವಂತೆ ಕರೆದಿದ್ದೀರಿ, ನನ್ನ ಬಳಿ ಇರೋ ಎಲ್ಲ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಮೊನ್ನೆಯೂ ಕೂಡ ನನಗೆ ಗೊತ್ತಿರುವ ಕೆಲ ವಿಚಾರಗಳನ್ನು ಹೇಳಿಕೊಂಡಿದ್ದೇನೆ. ಇಂದು ಕೂಡ ಪ್ರಕರಣ ಸಂಬಂಧ ಏನೇ ಪ್ರಶ್ನೆಗಳಿದ್ದರೂ ಕೇಳಿ ಉತ್ತರ ನೀಡುತ್ತೇನೆ. ಮುಂದಿನದ್ದು ನಿಮಗೆ ಬಿಟ್ಟ ವಿಚಾರ. ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಎಷ್ಟು ಬಾರಿಯಾದರೂ ಎಲ್ಲಿಗೆ ಬೇಕಾದರೂ ಕರೀರಿ ಬಂದು ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ: ಇಂದ್ರಜಿತ್
ಇಂದ್ರಜಿತ್ ಎರಡು ಬಾರಿಯ ವಿಚಾರಣೆ ವೇಳೆ ಯಾವುದೇ ಫೋಟೋ, ವಿಡಿಯೋ ರೀತಿಯ ಪೂರಕ ಸಾಕ್ಷಿ ನೀಡಿಲ್ಲ. ಆದರೆ ಕೆಲ ತೂಕದ ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಮೇಲೆ ನಾವು ನಮ್ಮ ಕೆಲಸ ಮಾಡುತ್ತೇವೆ. ಒಂದಷ್ಟು ಗಂಭೀರ ಅಂಶಗಳು ಇಂದು ಹೇಳಿದ್ದಾರೆ. ಅದು ಕೇಸ್‍ನ ಮುಂದಿನ ತನಿಖೆಗೆ ಸಹಕಾರಿಯಾಗಲಿದೆ. ಈ ಮಾಹಿತಿಯಿಂದ ತನಿಖೆಗೆ ಒಳ್ಳೆಯ ಲೀಡ್ ಸೀಗುವ ಸಾಧ್ಯತೆ ಇದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.