ಬೆಂಗಳೂರು: ಕನ್ನಡದ ಚಿತ್ರರಂದಲ್ಲಿ ಡ್ರಗ್ ಮಾಫಿಯಾ ಕುರಿತು ಸುದ್ದಿಯಾಗುತ್ತಿರುವುದು ಸಾಕಷ್ಟು ಬೇಸರವನ್ನು ತಂದಿದೆ. ಇದು ಒಳ್ಳೆಯ ಕ್ಷೇತ್ರವಾಗಿದ್ದು, ಡ್ರಗ್ ಮಾಫಿಯಾವನ್ನು ಎದುರಿಸಲು ಇಂದ್ರಜಿತ್ ಅವರು ಮುಂದೇ ನಿಂತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದುನಿಯಾ ವಿಜಯ್, ಡ್ರಗ್ ಮಾಫಿಯಾದಲ್ಲಿ ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆ ಆಗಬೇಕು. ಕೇವಲ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಯುವ ಜನತೆಗೆ ಇದರಿಂದ ಒಳ್ಳೆ ಕೆಲಸ ಆಗುತ್ತದೆ. ಇಂದ್ರಜಿತ್ ಅವರು ಮಾಡಿದ ಕೆಲಸದಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ ಎಂದರು.
Advertisement
Advertisement
ಚಿರಂಜೀವಿ ಸರ್ಜಾ ಅವರ ಕುರಿತು ಇಂದ್ರಜಿತ್ ಲಂಕೇಶ್ ಅವರು ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾವನ್ನಪ್ಪಿರುವವರ ಬಗ್ಗೆ ಮಾತನಾಡುವುದು ತಪ್ಪು. ಏಕೆಂದರೆ ಆ ಕುಟುಂಬ ಈಗಾಗಲೇ ಸಾಕಷ್ಟು ನೋವಿನಲ್ಲಿರುತ್ತದೆ. ಆದ್ದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇಂದ್ರಜಿತ್ ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಚಿರಂಜೀವಿ ಅವರ ನಿಧನ ನಮಗೂ ಸಾಕಷ್ಟು ನೋವು ಮಾಡಿದೆ ಎಂದು ತಿಳಿಸಿದರು.
Advertisement
ನಾನು ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾಗಿವೆ. ಚಿತ್ರರಂಗದಲ್ಲಿ ನಮ್ಮೊಂದಿಗೆ ಬಂದ ಹಲವರು ಈಗಾಗಲೇ ವಾಪಸ್ ಹೋಗಿದ್ದಾರೆ. ಇಂಡಸ್ಟ್ರಿಯಲ್ಲಿ ಎಂದು ಲಕ್ ನಂಬಿ ಬದುಕಬಾರದೂ, ಏಕೆಂದರೆ ಯಾವತ್ತೂ ಕಷ್ಟಪಟ್ಟರೇ ಮಾತ್ರ ಸಾಧನೆ ಮಾಡಲು ಸಾಧ್ಯ. ಇದುವರೆಗೂ ಇಂಡಸ್ಟ್ರಿಯಲ್ಲಿ ಎಂದೂ ಅಂತಹ ಯಾವುದೇ ಅನುಭವ ನನಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸಾಮಾಜಿಕ ಜಾಗೃತಿಗಾಗಿ ಇಂದ್ರಜಿತ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದು, ಎಲ್ಲವೂ ಬೆಳಕಿಗೆ ಬರಲಿದೆ. ಫಿಟ್ನೆಸ್ ಜಗತ್ತಿನಲ್ಲೂ ಇಂತಹ ಅನುಭವ ನನಗೆ ಆಗಿಲ್ಲ. ಆದರೆ ಈ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇದೆ ಎಂದರು. ಯಾರೇ ಇಂತಹ ಡ್ರಗ್ಸ್ ಸೇವನೆ ಒಳಗಾಗಿದ್ದರೂ ದಯವಿಟ್ಟು ಅದನ್ನು ಬಿಟ್ಟು ಹೊರ ಬನ್ನಿ ಎಂದು ಮನವಿ ಮಾಡುತ್ತೇನೆ ಎಂದರು.
ಯಾರೇ ಆಗಲಿ ಇಂತಹ ವಸ್ತುಗಳ ಸೇವನೆ ಮಾಡುತ್ತಿದ್ದರೆ ಅವರ ಪೋಷಕರು ಕೂಡಲೇ ಎಚ್ಚೆತ್ತು ವೈದ್ಯರ ಸಲಹೆ ಪಡೆಯಿರಿ. ಶಾಲಾ-ಕಾಲೇಜುಗಳಲ್ಲಿ ಇಂತಹ ವಿದ್ಯಾರ್ಥಿಗಳು ಕಂಡು ಬಂದರೇ ಕೂಡಲೇ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿ. ಇದರಿಂದ ಎಚ್ಚರವಿಲ್ಲದಿದ್ದರೇ ಜೀವನವೇ ನಾಶವಾಗುತ್ತದೆ. ಚಿತ್ರರಂಗದ ಯಾವುದೋ ನಾಲ್ವರು ನಟ-ನಟಿಯರು ಮಾಡುವ ಇಂತಹ ಕೃತ್ಯಗಳಿಂದ ಕೊಟ್ಟ ಹೆಸರು ಬರುತ್ತಿದೆ ಎಂದರು. ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಆರೋಪಗಳು ಸಾಬೀತು ಆದರೆ ಮಾತ್ರ ಆ ಬಗ್ಗೆ ಮಾತನಾಡಲು ಸಾಧ್ಯ. ಆದ್ದರಿಂದ ತನಿಖೆಯಿಂದಲೇ ಎಲ್ಲವೂ ಹೊರಬರಬೇಕಿದೆ ಎಂದು ತಿಳಿಸಿದರು.