ಇಂದ್ರಜಿತ್ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ಅಡಿಕ್ಟ್; ಪ್ರಮೋದ್ ಮುತಾಲಿಕ್

Public TV
1 Min Read
Pramod Muthalik Indrajit Lankesh

– ಡ್ರಗ್ ಮಾಫಿಯಾದಲ್ಲಿ ಪೊಲೀಸರು, ರಾಜಕಾರಣಿಗಳೂ ಇದ್ದಾರೆ

ಹಾವೇರಿ: ಇವತ್ತು ಇಂದ್ರಜಿತ್ ಲಂಕೇಶ್ ದೊಡ್ಡ ಪ್ರಮಾಣದ ಹೀರೋ ಆಗಲು ಹೊರಟಿದ್ದಾರೆ. ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವೆಲ್ಲಿ ಹೋಗಿದ್ರಿ? ಆಗ ಯಾಕೆ ಮಾತನಾಡಲಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಫಿಲ್ಮ್ ಲ್ಯಾಂಡ್ ಬಗ್ಗೆ ಮಾತನಾಡುವ ಇಂದ್ರಜಿತ್ ಲಂಕೇಶ್ ಆಗ ಯಾಕೆ ಮಾತನಾಡಲಿಲ್ಲ. ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ. ಅವರನ್ನು ಯಾಕೆ ಇದಕ್ಕೆ ಎಳೆದು ತರುತ್ತೀರಾ ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

INDRAJITH A

ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡಿಕೊಂಡಿರುತ್ತಾರೆ. ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಈಗ ಹಾರಾಡುತ್ತಾರೆ. ಆದರೆ ರಾಜಕಾರಣಿಗಳೇ ಇದರಲ್ಲಿ ಇದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.

INDRAJITH LANKESH GOURI LANKESH COLLAGE

ಹ್ಯಾರಿಸ್ ಪುತ್ರ ಇದರಲ್ಲಿದ್ದಾರೆ. ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸುತ್ತೇನೆ ಎಂದು ಮುತಾಲಿಕ್ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು. ಗೃಹ ಸಚಿವರು ಮತ್ತು ಸಿಟಿ ರವಿ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹೇಳುತ್ತಾರೆ. ಈಗ ಎಲ್ಲ ನಾಟಕ ಮಾಡುತ್ತಾರೆ. ಸ್ವಲ್ಪ ದಿನದಲ್ಲಿ ಎಲ್ಲ ಮರೆತು ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

pramod muthalik

ಈ ಹಿಂದೆ 2009ರಲ್ಲಿ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಅವತ್ತು ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಗ ನನ್ನನ್ನೇ ಟಾರ್ಗೆಟ್ ಮಾಡಿದರು ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *