ಬೆಂಗಳೂರು: ಇಂದು 8,191 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 8,611 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಇಂದು 101 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5,19,537 ಏರಿಕೆಯಾಗಿದೆ. ಈ ಪೈಕಿ 4,13,452 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 98,043 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 8,023 ಮಂದಿ ಮೃತಪಟ್ಟಿದ್ದು, 811 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5,09,512 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ.
ಇಂದು 60,477 ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ ಒಟ್ಟು 42,40,044 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಎಂದಿನಂತೆ ಬೆಂಗಳೂರಿನಲ್ಲಿ 3,322 ಮಂದಿಗೆ ಸೋಂಕು ಬಂದಿದ್ದರೆ 2,970 ಮಂದಿ ಬಿಡುಗಡೆಯಾಗಿದ್ದಾರೆ. ಮೈಸೂರಿನಲ್ಲಿ 481, ದಕ್ಷಿಣ ಕನ್ನಡದಲ್ಲಿ 380, ಕೊಪ್ಪಳ 337, ಧಾರವಾಡ 305 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿ ಒಟ್ಟು 811 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 258, ಹಾಸನ 62, ಬಳ್ಳಾರಿ 70 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.