-ಒಟ್ಟು ಸೋಂಕಿತರ ಸಂಖ್ಯೆ 1,45,830ಕ್ಕೇರಿಕೆ
ಬೆಂಗಳೂರು: ಇಂದು ರಾಜ್ಯದಲ್ಲಿ 6,259 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,45,830ಕ್ಕೆ ಏರಿಕೆಯಾಗಿದೆ.
ಇಂದು 110 ಮಂದಿ ಕೊರೊನಾಗೆ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 2,704ಕ್ಕೇರಿಕೆಯಾಗಿದೆ. ಒಟ್ಟು 634 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 73,846 ಸಕ್ರಿಯ ಪ್ರಕರಣಗಳಿವೆ. ರಾಜಧಾನಿಯಲ್ಲಿ ಇಂದು 2035 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 63,033ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 30 ಮಂದಿಯನ್ನು ಕೊರೊನಾ ಬಲಿ ಪಡೆದಿದ್ದು, 34,021 ಸಕ್ರಿಯ ಪ್ರಕರಣಗಳಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 2035, ಮೈಸೂರು 662, ಕಲಬುರಗಿ 285, ಬಳ್ಳಾರಿ 284, ಬೆಳಗಾವಿ 263, ದಕ್ಷಿಣ ಕನ್ನಡ 225, ದಾವಣಗೆರೆ 191, ಧಾರವಾಡ 188, ಹಾಸನ 188, ಚಿಕ್ಕಬಳ್ಳಾಪುರ 171, ಉಡುಪಿ 170, ಕೊಪ್ಪಳ 163, ಹಾವೇರಿ 157, ರಾಯಚೂರು 144, ಬಾಗಲಕೋಟೆ 144, ಮಂಡ್ಯ 126, ಬೀದರ್ 114, ಗದಗ 96, ಬೆಂಗಳೂರು ಗ್ರಾಮಾಂತರ 82, ತುಮಕೂರು 78, ಯಾದಗಿರಿ 76, ವಿಜಯಪುರ 71, ರಾಮನಗರ 65, ಚಿಕ್ಕಮಗಳೂರು 63, ಉತ್ತರ ಕನ್ನಡ 57, ಚಾಮರಾಜನಗರ 57, ಕೋಲಾರ 46, ಕೊಡಗು 31, ಶಿವಮೊಗ್ಗ 15 ಮತ್ತು ಚಿತ್ರದುರ್ಗದಲ್ಲಿ 12 ಪ್ರಕರಣಗಳು ವರದಿಯಾಗಿವೆ.
ಕೋವಿಡ್19: ಇಂದಿನ ವರದಿ 04/08/2020#KarnatakaFightsCorona#Covid19KarnatakaUpdate???? pic.twitter.com/FodYdeqgPa
— B Sriramulu (@sriramulubjp) August 4, 2020