ಬೆಂಗಳೂರು: ಇಂದು 419 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸದ್ಯ 5,910 ಸಕ್ರಿಯ ಪ್ರಕರಣಗಳಿದ್ದು, 135 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 9,44,856ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12,263 ಜನರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 430 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.63 ಮತ್ತು ಮರಣ ಪ್ರಮಾಣ ಶೇ.0.95 ರಷ್ಟಿದೆ. ಇಂದು 66,050 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು 86,074 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239, ಬಳ್ಳಾರಿ 4,198, ಬೆಳಗಾವಿ 5,196, ಬೆಂಗಳೂರು ಗ್ರಾಮಾಂತರ 1,076, ಬೆಂಗಳೂರು ನಗರ 11,683, ಬೀದರ್ 1,822, ಚಾಮರಾಜನಗರ 762, ಚಿಕ್ಕಬಳ್ಳಾಪುರ 2,292, ಚಿಕ್ಕಮಗಳೂರು 2,562, ಚಿತ್ರದುರ್ಗ 2,478, ದಕ್ಷಿಣ ಕನ್ನಡ 2,787, ದಾವಣಗೆರೆ 1,377, ಧಾರವಾಡ 2,333, ಗದಗ 3,272, ಹಾಸನ 2,596, ಹಾವೇರಿ 1,451, ಕಲಬುರಗಿ 2,210, ಕೊಡಗು 1,017, ಕೋಲಾರ 2,923, ಕೊಪ್ಪಳ 2,479, ಮಂಡ್ಯ 1,585, ಮೈಸೂರು 3,849, ರಾಯಚೂರು 2,278, ರಾಮನಗರ 1,053, ಶಿವಮೊಗ್ಗ 1,851, ತುಮಕೂರು 7,925, ಉಡುಪಿ 2,318, ಉತ್ತರ ಕನ್ನಡ 3,225, ವಿಜಯಪುರ 4,986 ಮತ್ತು ಯಾದಗಿರಿ 1,251
ಕೊರೊನಾ ಪ್ರಕರಣ ವಿವರ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 258, ಬೀದರ್ 1, ಚಾಮರಾಜನಗರ 2, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 10, ದಕ್ಷಿಣ ಕನ್ನಡ 18, ದಾವಣಗೆರೆ 5, ಧಾರವಾಡ 8, ಗದಗ 1, ಹಾಸನ 4, ಹಾವೇರಿ 0, ಕಲಬುರಗಿ 17, ಕೊಡಗು 6, ಕೋಲಾರ 8, ಕೊಪ್ಪಳ 0, ಮಂಡ್ಯ 2, ಮೈಸೂರು 22, ರಾಯಚೂರು 1, ರಾಮನಗರ 1, ಶಿವಮೊಗ್ಗ 6, ತುಮಕೂರು 20, ಉಡುಪಿ 6, ಉತ್ತರ ಕನ್ನಡ 3, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.