ಬೆಂಗಳೂರು: ಇಂದು ಕರ್ನಾಟಕದಲ್ಲಿ ಒಟ್ಟು 34,281 ಮಂದಿಗೆ ಕೊರೊನಾ ಬಂದಿದ್ದು, 49,953 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾದ್ಯಂತ ಒಟ್ಟು 468 ಜನ ಕೊರೊನಾಗೆ ಬಲಿಯಾಗಿದ್ದು, ಶಿವಮೊಗ್ಗದಲ್ಲಿ 16 ವರ್ಷದ ಯುವಕ ಮರಣಹೊಂದಿದ್ದಾನೆ. ಬೆಂಗಳೂರಿನಲ್ಲಿ 11,772 ಮಂದಿಗೆ ಕೊರೊನಾ ದೃಢಪಟ್ಟಿದ್ದು, 218 ಜನ ಬಲಿಯಾಗಿದ್ದಾರೆ.
ಇಂದು 12,610 ಆಂಟಿಜನ್ ಟೆಸ್ಟ್ 1,16,928 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,29,538 ಸ್ಯಾಂಪಲ್‍ಗಳನ್ನು ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,58,890ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ ಶೇ.26.46 ಖಚಿತ ಪ್ರಮಾಣವಿದ್ದರೆ ಶೇ.1.36 ಮರಣ ಪ್ರಮಾಣವಿದೆ. ಇಂದು ರಾಜ್ಯದಲ್ಲಿ ಒಟ್ಟು 66,305 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,06,655 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 17,24,428 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಇಲ್ಲಿಯವರೆಗೆ 23,306 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ತುಮಕೂರು 2,427, ಬೆಳಗಾವಿ 2,234, ಮೈಸೂರು 1,730, ಹಾಸನ 1,428, ಬಳ್ಳಾರಿ 1,297, ಮತ್ತು ಚಿಕ್ಕಮಗಳೂರಿನಲ್ಲಿ 1,047 ಮಂದಿಗೆ ಕೊರೊನಾ ಬಂದಿದೆ.