– ಬೆಂಗಳೂರಿನಲ್ಲಿ 1,148 ಮಂದಿಗೆ ಸೋಂಕು
– 778 ಮಂದಿ ಬಿಡುಗಡೆ, ಐಸಿಯುನಲ್ಲಿ 452 ಮಂದಿ
ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಇಂದು ಒಂದೇ ದಿನ 2,062 ಮಂದಿಗೆ ಸೋಂಕು ಬಂದಿದ್ದು 54 ಮಂದಿ ಮೃತಪಟ್ಟಿದ್ದಾರೆ. 778 ಮಂದಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 28,877ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 11,876 ಮಂದಿ ಬಿಡುಗಡೆಯಾಗಿದ್ದರೆ 16,527 ಸಕ್ರಿಯ ಪ್ರಕರಣಗಳಿವೆ. ಒಟ್ಟು 470 ಮಂದಿ ಮೃತಪಟ್ಟಿದ್ದು, 452 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 1,148, ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಬಳ್ಳಾರಿ 59, ಮೈಸೂರು 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ 31, ಹಾವೇರಿ 31, ಬೀದರ್ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ 24, ತುಮಕೂರು 24, ಚಿಕ್ಕಮಗಳೂರು 23, ಮಂಡ್ಯ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು 17, ಶಿವಮೊಗ್ಗ 17, ಕೋಲಾರ 16, ಯಾದಗಿರಿ 11, ಕೊಪ್ಪಳ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ.
ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 778 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರ 418, ಹಾಸನ 97, ಬಳ್ಳಾರಿ 30, ಬೆಳಗಾವಿ 29, ಗದಗ 26, ಧಾರವಾಡ 23, ಕಲಬುರಗಿ 22, ಚಿಕ್ಕಮಗಳೂರು 19, ಮೈಸೂರು 18, ದಾವಣಗೆರೆ 13, ಕೊಡಗು 12, ಚಿತ್ರದುರ್ಗ 12, ಬಾಗಲಕೋಟೆ 9, ಹಾವೇರಿ 8, ಕೊಪ್ಪಳ 7, ಚಾಮರಾಜನಗರ 7, ಉಡುಪಿ 7, ರಾಯಚೂರು 4, ಶಿವಮೊಗ್ಗ 4, ಚಿಕ್ಕಬಳ್ಳಾಪುರ 3, ಯಾದಗಿರಿ 3, ವಿಜಯಪುರ 2, ತುಮಕೂರು, ಕೋಲಾರ, ಬೀದರ್ನಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
ಐಸಿಯುನಲ್ಲಿ ಎಷ್ಟು ಮಂದಿ?
ರಾಜ್ಯದಲ್ಲಿ ಒಟ್ಟು 452 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 290, ಧಾರವಾಡ 21, ರಾಯಚೂರು 18, ಬಳ್ಳಾರಿ 14, ಕಲಬುರಗಿ 13, ಮೈಸೂರು 11, ಮಂಡ್ಯ 10, ಬೆಳಗಾವಿ 9, ಗದಗ, ತಮಕೂರು, ದಕ್ಷಿಣ ಕನ್ನಡ, ಹಾಸನದಲ್ಲಿ ತಲಾ 7 ಮಂದಿ , ಶಿವಮೊಗ್ಗ 5, ಬಾಗಲಕೋಟೆ 4, ದಾವಣಗೆರೆ 3, ಚಿಕ್ಕಬಳ್ಳಾಪುರ 3, ಚಾಮರಾಜನಗರ, ಕೊಪ್ಪಳ, ಉಡುಪಿಯಲ್ಲಿ ತಲಾ 2, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ, ಹಾವೇರಿ, ರಾಮನಗರದಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.