– ಬೆಂಗಳೂರು 1,742, ಬೀದರ್ ನಲ್ಲಿ 247 ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಇಂದೂ ಸಹ ಕೊರೊನಾ ಓಟ ಮುಂದುವರಿದಿದ್ದು, 2,792 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಇಂದು 16 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದಿನ 29/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/lTrF3YzIj8 @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/VYdvtsBhxT
— K’taka Health Dept (@DHFWKA) March 29, 2021
ರಾಜ್ಯದಲ್ಲಿ ಇಂದು ಬರೋಬ್ಬರಿ 2,792 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 1,742 ಕೇಸ್ ಪತ್ತೆಯಾಗಿವೆ. ಸಿಲಿಕಾನ್ ಸಿಟಿಯಲ್ಲಿ 9 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 227 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ 95, ಕಲಬುರಗಿ 25 ಹಾಗೂ ತುಮಕೂರಿನಲ್ಲಿ 14 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,849ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಒಟ್ಟು ಸಂಖ್ಯೆ 9,89,804ಕ್ಕೆ ಏರಿಕೆಯಾಗಿದೆ. ಇಂದು 1,964 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.20ರಷ್ಟು ಮತ್ತು ಮರಣ ಪ್ರಮಾಣ ಶೇ.0.57ರಷ್ಟಿದೆ. ಬೆಂಗಳೂರು ನಗರದ ಬಳಿಕ ಬೀದರ್ನಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 247 ಕೇಸ್ ಪತ್ತೆಯಾಗಿವೆ. ಇಂದು ಒಟ್ಟು 56,374 ಜನರಿಗೆ ಲಸಿಕೆ ನೀಡಲಾಗಿದೆ.
ಬೆಂಗಳೂರಿನ ಹೊರತುಪಡಿಸಿ ಇಂದು ಬೀದರ್ ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 247 ಜನರಿಗೆ ಸೋಂಕು ತಗುಲಿದೆ. ಒಬ್ಬರು ಸಾವನ್ನಪ್ಪಿದ್ದಾರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 748ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 12, ಬಳ್ಳಾರಿ 33, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 28, ಬೆಂಗಳೂರು ನಗರ 1,742, ಬೀದರ್ 247, ಚಾಮರಾಜನಗರ 4, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 25, ಚಿತ್ರದುರ್ಗ 5, ದಕ್ಷಿಣ ಕನ್ನಡ 45, ದಾವಣಗೆರೆ 2, ಧಾರವಾಡ 55, ಗದಗ 14, ಹಾಸನ 32, ಹಾವೇರಿ 3, ಕಲಬುರಗಿ 118, ಕೊಡಗು 2, ಕೋಲಾರ 33, ಕೊಪ್ಪಳ 21, ಮಂಡ್ಯ 41, ಮೈಸೂರು 110, ರಾಯಚೂರು 7, ರಾಮನಗರ 6, ಶಿವಮೊಗ್ಗ 5, ತುಮಕೂರು 60, ಉಡುಪಿ 71, ಉತ್ತರ ಕನ್ನಡ 15, ವಿಜಯಪುರ 28 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.