ಇಂದು 1,196 ಪಾಸಿಟಿವ್‌, 2,036 ಡಿಸ್ಚಾರ್ಜ್‌ – 5 ಮಂದಿ ಬಲಿ

Public TV
1 Min Read
Corona SMG

ಬೆಂಗಳೂರು: ಇಂದು ಕರ್ನಾಟಕಲ್ಲಿ 1,196 ಮಂದಿಗೆ ಕೊರೊನಾ ಬಂದಿದ್ದು, 2,036 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇಂದು ಕೇವಲ 5 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಇಲ್ಲಿಯವರೆಗೆ ಒಟ್ಟು 9,01,410 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 8,72,038 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 17,409 ಸಕ್ರಿಯ ಪ್ರಕರಣಗಳಿವೆ.

dec 13 covid report 1

ಕರ್ನಾಟಕದಲ್ಲಿ ಒಟ್ಟು 11,944 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಸದ್ಯ 260 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 8,768 ಆಂಟಿಜನ್‌ ಟೆಸ್ಟ್‌ , 79,777 ಆರ್‌ಟಿ ಪಿಸಿಆರ್‌ ಟೆಸ್ಟ್‌ ಸೇರಿ ಒಟ್ಟು 88,542 ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 1,23,55,358 ಕೊರೊನಾ ಪರೀಕ್ಷೆ ಮಾಡಲಾಗಿದೆ.

dec 13 covid report 2

ಇಂದು ಬೆಂಗಳೂರು ನಗರದಲ್ಲಿ 3, ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 672, ಚಿಕ್ಕಬಳ್ಳಾಪುರ 55, ಮೈಸೂರು 42, ದಕ್ಷಿಣ ಕನ್ನಡ 36, ಚಿತ್ರದುರ್ಗದಲ್ಲಿ 33 ಮಂದಿಗೆ ಸೋಂಕು ಬಂದಿದೆ.

ಐಸಿಯುನಲ್ಲಿ 260 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 109, ಕಲಬುರಗಿ 21, ತುಮಕೂರು 16, ಹಾಸನ ಮತ್ತು ಗದಗದಲ್ಲಿ ತಲಾ 10 ಮಂದಿ ಐಸಿಯುನಲ್ಲಿದ್ದಾರೆ.

dec 13 covid report 3

Share This Article
Leave a Comment

Leave a Reply

Your email address will not be published. Required fields are marked *