– ಎಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದರು
ಹಾಸನ: ಜಿಲ್ಲೆಯಲ್ಲಿ ಇಂದು ಕೂಡ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದೆ.
ಹಾಸನ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಶುಕ್ರವಾರ ಮುಂಬೈನಿಂದ ಬಾಣಾವರಕ್ಕೆ ಕಾರಿನಲ್ಲಿ ಬಂದಿದ್ದ 21 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಾರಿನಲ್ಲಿ 7 ಮಂದಿ ಹಾಸನಕ್ಕೆ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.
Advertisement
Advertisement
ಏಳು ಜನರನ್ನು ಅರಸೀಕೆರೆ ತಾಲೂಕಿನ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಎಲ್ಲರೂ ಹಾಸನ ಜಿಲ್ಲೆಯವರಾಗಿದ್ದು, ಕಾರಿನ ಚಾಲಕ ಹುಣಸೂರಿನವರು ಎಂದು ತಿಳಿದು ಬಂದಿದೆ. ಮೇ, 13ರಂದು ಮುಂಬೈನಿಂದ ಹಾಸನಕ್ಕೆ ಬಸ್‍ನಲ್ಲಿ ಬಂದಿದ್ದವರಲ್ಲಿ ಇಬ್ಬರಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಸ್ಸಿನಲ್ಲಿ ಬಂದಿದ್ದ 50 ವರ್ಷದ ವ್ಯಕ್ತಿ ಮತ್ತು 63 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಇವರು ಎಲ್ಲೂ ಹೋಗದೆ ನೇರವಾಗಿ ಕ್ವಾರಂಟೈನ್‍ಗೆ ಬಂದಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.
Advertisement
Advertisement
ಹಾಸನದಲ್ಲಿ ಇನ್ನು ಕೂಡ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಈಗ ಪಾಸಿಟಿವ್ ಬಂದವರ ಜೊತೆಗೆ 50ಕ್ಕೂ ಹೆಚ್ಚು ಜನ ಪ್ರಾಥಮಿಕ ಸಂಪರ್ಕದಲ್ಲಿ ಹೊಂದಿದ್ದಾರೆ. ಮುಂಬೈನಿಂದ ಎರಡು ಖಾಸಗಿ ಬಸ್ಸಿನಲ್ಲಿ ಹಾಸನಕ್ಕೆ ಬಂದವರಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಿದೆ. ಒಂದು ಖಾಸಗಿ ಬಸ್ಸಿನಲ್ಲಿ ಕೊರೊನಾ ಪಾಸಿಟಿವ್ ಬಂದ ಮಹಿಳೆ ಜೊತೆ ಹಾಸನಕ್ಕೆ 20 ಜನ ಪ್ರಯಾಣಿಸಿದ್ದರು. ಮತ್ತೊಂದು ಖಾಸಗಿ ಬಸ್ಸಿನಲ್ಲಿ 26 ಜನ ಸೋಂಕಿತನೊಂದಿಗೆ ಪ್ರಯಾಣ ಮಾಡಿದ್ದರು. ಮುಂಬೈನಿಂದ ಬಂದ ಎಲ್ಲರನ್ನೂ ನೇರವಾಗಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು ಎಂದು ಡಿಸಿ ಹೇಳಿದ್ದಾರೆ.