ಬೆಂಗಳೂರು: ರಾಜ್ಯದ್ಯಾಂತ ವರುಣನ ಆರ್ಭಟ ಜೋರಾಗಿದೆ. ಇಂದು ಹಲವು ಕಡೆ ಭಾರೀ ಮಳೆ ಇರಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿಎಸ್ ಪಾಟೀಲ್ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.
Advertisement
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗ, ಮಲೆನಾಡು ,ದಕ್ಷಿಣ ಕನ್ನಡ ಉಡುಪಿ, ಕೊಡಗು ಉತ್ತರ ಕನ್ನಡದಲ್ಲಿ ಪ್ರವಾಹದ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಇಂದು ಭಾರೀ ಮಳೆ ಎಲ್ಲ ಕಡೆ ಆಗಲಿದೆ. ನಾಳೆಯಿಂದ ಕೊಂಚ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಹಾಗೂ ಬಂಗಾಳ ಉಪಸಾಗರದಲ್ಲಿ ವಾಯುಬಾರ ಕುಸಿತದ ಕಾರಣದಿಂದಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಆಗಸ್ಟ್‌ನಲ್ಲಿ ಕೂಡ ಇದೇ ರೀತಿ ಪ್ರವಾಹ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಫೋನ್ಗಳನ್ನು ಕದ್ದಾಲಿಕೆ ಮಾಡಲಾಗಿದೆ: ರಾಹುಲ್ ಗಾಂಧಿ
Advertisement
Advertisement
ಶಿವಮೊಗ್ಗ ತಾಳಗುಪ್ಪ- 267.4 mm, ಸಿದ್ಧಾಪುರ- 235.8 mm, ಯಲ್ಲಾಪುರ- 225.6 mm, ಹಳಿಯಾಳ- 208.ಒಒ, ಬೆಳಗಾವಿ – 207-8 mm , ನಿಪ್ಪಾಣಿ – 166.6, ಅನ್ನವಟ್ಟಿ- 244.2 mm ಹೆಚ್ಚು ಮಳೆ ಮಳೆಯಾದ ಜಿಲ್ಲೆಗಳಾಗಿವೆ. ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಚಿಕ್ಕ ಮಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ ಧಾರವಾಡ ಭಾರೀ ಮಳೆ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ಸೂಚನೆ ನೀಡಿದೆ.