ಬೆಂಗಳೂರು: ಇಂದು ರೋಡಿಗೆ ಇಳಿಯೋ ಮುನ್ನ ಎಚ್ಚರವಾಗಿರಿ. ಯಾಕಂದ್ರೆ ಇಂದು ಸಾರಿಗೆ ನೌಕರರು ಸಂಪೂರ್ಣವಾಗಿ ಬಂದ್ ಗೆ ಕರೆಕೊಟ್ಟಿದ್ದಾರೆ.
ಹೌದು. ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಲ್ಲಿ ಬಸ್ಸುಗಳ ಓಡಾಟ ಬಹುತೇಕ ಸ್ಥಗಿತಗೊಂಡಿದೆ. ಬಸ್ ಹೊರಡದೆ ಡಿಪೋದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ವಿವಿಧ ಡಿಪೋಗಳಿಂದ ಸಿಬ್ಬಂದಿ ಒಂದೆಡೆ ಸೇರಿದ್ದು, ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಗಣಿಸುವವವರೆಗೆ ಹೋರಾಟ ಕೈ ಬಿಡಲ್ಲ ಎಂದು ಆಗ್ರಹಿಸುತ್ತಿದ್ದಾರೆ.
Advertisement
Advertisement
ನಿನ್ನೆ ವಿಧಾನ ಸೌಧ ಮುತ್ತಿಗೆ ಹಾಕಿದರೂ ಸರ್ಕಾರ ಅಹವಾಲು ಆಲಿಸಲಿಲ್ಲ ಎಂದು ಇಂದು ಸಾರಿಗೆ ನೌಕರರು ರೊಚ್ಚಿಗೆದ್ದಿದ್ದಾರೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ಬಸ್ ಆರಂಭ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೂವರೆ ಸಾವಿರ ಬಿಎಂಟಿಸಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
Advertisement
Advertisement
ಒಂದೆಡೆ ಮೆಟ್ರೋ ಸಂಚಾರದಲ್ಲಿ ಕೂಡ ಏರುಪೇರಾಗುವ ಸಾಧ್ಯತೆಗಳಿವೆ. ಇನ್ನೊಂದೆಡೆ ನಾಲ್ಕು ಸಾರಿಗೆ ನಿಗಮಗಳಾದ ಬಿಎಂಟಿಸಿ ಸಾರಿಗೆ ನಿಗಮ, ಕೆಎಸ್‍ಆರ್‍ಟಿಸಿ ಸಾರಿಗೆ ನಿಗಮ, ವಾಯುವ್ಯ ಸಾರಿಗೆ ನಿಗಮ ಹಾಗೂ ನೈರುತ್ಯ ಸಾರಿಗೆ ನಿಗಮ ನೌಕರರು ಕೂಡ ಡ್ಯೂಟಿಗೆ ಬರಲ್ಲ.