ಇಂದು ಮದ್ವೆ ಆಗಬೇಕಿದ್ದ ವಧುವಿಗೆ ಕೊರೊನಾ

Public TV
1 Min Read
bride 768x508 1

ಬೆಂಗಳೂರು: ಇಂದು ಮದುವೆಯಾಗಬೇಕಿದ್ದ ಹುಡುಗಿಗೆ ಕೊರೊನಾ ಸೋಂಕು ದೃಢವಾಗಿದ್ದು, ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಚಾಮರಾಜಪೇಟೆಯ ನಿವಾಸಿ 24 ವರ್ಷದ ಯುವತಿಗೆ ಕೊರೊನಾ ಸೋಂಕು ದೃಢವಾಗಿದೆ. ಚಾಮರಾಜಪೇಟೆಯ 1ನೇ ಕ್ರಾಸ್‍ನಲ್ಲಿ ಯುವತಿಯ ಕುಟುಂಬ ವಾಸವಾಗಿದೆ. ಯುವತಿಗೆ ಕೊರೊನಾ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

corona 11

ಯುವತಿ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚೆಕ್ ಮಾಡಿಸಿದ್ದಾಳೆ. ಅದರ ವರದಿ ಶನಿವಾರ ಮಧ್ಯಾಹ್ನ ಬಂದಿದೆ. ಬಿಬಿಎಂಪಿ ಫೋನ್ ಮಾಡಿ ಕೊರೊನಾ ದೃಢವಾಗಿರುವ ಮಾಹಿತಿಯನ್ನು ತಿಳಿಸಿದ್ದಾರೆ. ಇಂದು ಈ ಯುವತಿಯ ಮದುವೆ ನಡೆಯಬೇಕಿತ್ತು. ಹೀಗಾಗಿ ಶನಿವಾರ ರಾತ್ರಿ ಕುಟುಂಬದರು ಆರತಕ್ಷತೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಮದುವೆ ಮನೆಗೆ ಹೊರಟ್ಟಿದ್ದ ಕುಟುಂಬದವರು ಬಿಬಿಎಂಪಿ ಸಿಬ್ಬಂದಿ ತಡೆದಿದ್ದಾರೆ.

marriage bride

ಯುವತಿ ಸೇರಿದಂತೆ ಇಡೀ ಕುಟುಂಬವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಮಿಳುನಾಡು ಮೂಲದ ಯುವಕನೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಅವರಿಗೆ ದಾರಿ ಮಧ್ಯದಲ್ಲೇ ಮಾಹಿತಿ ತಿಳಿಸಿ ಮದುವೆ ಮುಂದೂಡುವಂತೆ ಬಿಬಿಎಂಪಿ ಸಿಬ್ಬಂದಿ ಮನವೊಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *