ಬೆಂಗಳೂರು: ನಗರದ ಕೋವಿಡ್ ಭೀತಿ ಮತ್ತೆ ಹೆಚ್ಚಾಗಿದೆ. ಮತ್ತೆ ಅಪಾಯಕಾರಿ ರೀತಿಯಲ್ಲಿ ಕೊರೊನಾ ಎಲ್ಲರಿಗೂ ಹಬ್ಬುತ್ತಿದ್ದು, ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿ 1048 ಮಂದಿಗೆ ಕೊರೊನಾ ಬರುವ ಸಾಧ್ಯತೆಯಿದೆ.
Advertisement
ಗುರುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರವರೆಗಿನ ಪಾಸಿಟಿವ್ ಪ್ರಕರಣದ ವರದಿ ಇಂದು ಬರಲಿದ್ದು, ಸತತ ಐದು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
Advertisement
ನಿನ್ನೆ ಒಂದೇ ದಿನ 44 ಸಾವಿರ ಕೋವಿಡ್ ಟೆಸ್ಟ್ ಸಹ ಮಾಡಲಾಗಿತ್ತು. ಈ ವರ್ಷ ಸೋಂಕು ಪರೀಕ್ಷೆ ಮಾಡಿದ ಗರಿಷ್ಟ ಸಂಖ್ಯೆ ಇದಾಗಿದ್ದು, ಇಂದು ಅಥವಾ ನಾಳೆ ಪರೀಕ್ಷೆಗೆ ಒಳಪಟ್ಟವರ ಫಲಿತಾಂಶ ತಿಳಿಯಲಿದೆ. ನಗರದ ಪೂರ್ವ ವಲಯ, ಪಶ್ಚಿಮ ವಲಯ, ದಕ್ಷಿಣ ವಲಯ, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ನೂರಕ್ಕಿಂತ ಅಧಿಕ ಕೇಸ್ ದಾಖಲಾಗಿದ್ದು, ಇತರ ಭಾಗಗಳಲ್ಲಿ ಕಡಿಮೆ ಪ್ರಕರಣ ಕಂಡುಬಂದಿದೆ.
Advertisement
Advertisement
ಸದ್ಯ ಕಂಡುಬರುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.90 ರಷ್ಟು ಜನರಿಗೆ ರೋಗ ಲಕ್ಷಣಗಳು ಇಲ್ಲ. ಕೆಲವರಿಗೆ ಮಾತ್ರ ತೀವ್ರ ರೋಗದ ಲಕ್ಷಣ ಕಂಡುಬರುತ್ತಿದೆ. ಆದರೆ ಮನೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದರೆ, ಅವರ ಪ್ರಾಥಮಿಕ ಸಂಪರ್ಕಿತರೆಲ್ಲರಿಗೂ ಪಾಸಿಟಿವ್ ಬರುತ್ತಿದ್ದು, ಹೋಂ ಐಸೋಲೇಷನ್ ನಿಯಮ ಸರಿಯಾಗಿ ಪಾಲನೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.