ಬೆಂಗಳೂರು: ಒಂದು ಕೇಂದ್ರಾಡಳಿತ ಪ್ರದೇಶ, ನಾಲ್ಕು ರಾಜ್ಯಗಳಲ್ಲು ಚುನಾವಣೆ ಹಬ್ಬ ನಡೆಯಲಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯಲಿದೆ. ಕೇರಳ ಮತ್ತು ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.
Advertisement
ಕೇರಳದ 140 ಹಾಗೂ ತಮಿಳುನಾಡಿನ 234 ಪುದುಚೇರಿಯ 30 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಸೇರಲಿದೆ. ಕೇರಳದಲ್ಲಿ ಎಲ್‍ಡಿಎಫ್, ಯುಡಿಎಫ್ ಮತ್ತು ಎನ್‍ಡಿಎ ಒಕ್ಕೂಟದ ನಡುವೆ ತ್ರಿಕೋನ ಸ್ಪರ್ಧೆ ಇದೆ. ಇತ್ತ ತಮಿಳುನಾಡಿನಲ್ಲಿ ಡಿಎಂಕೆ ವರ್ಸಸ್ ಎಐಎಡಿಎಂ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷ ಏರ್ಪಟ್ಟಿದೆ. ಎರಡನೇ ಬಾರಿಗೆ ಸಿಎಂ ಆಗಲು ಪಿಣರಾಯಿ ವಿಜಯನ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪ್ರಯತ್ನದಲ್ಲಿದ್ದಾರೆ.
Advertisement
Advertisement
ಕೇರಳ:
ಮಂಗಳವಾರ ಕೇರಳದ ಎಲ್ಲ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಒಟ್ಟು 2,74,46,039 ಮತದಾರರಿದ್ದಾರೆ. ಸಿಪಿಐ(ಎಂ) ನೇತೃತ್ವದಲ್ಲಿ ಎಲ್‍ಡಿಎಫ್, ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್, ಮತ್ತು ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ಮಿತ್ರ ಪಕ್ಷಗಳ ಸ್ಪರ್ಧೆ ಮಾಡಿವೆ. ಸಿಪಿಐ (ಎಂ) ಕಳೆದ ಬಾರಿ 91 ಸ್ಥಾನಗಳೊಂದಿಗೆ ಅಧಿಕಾರ ರಚಿಸಿತ್ತು. ಕಾಂಗ್ರೆಸ್ 46 ಸ್ಥಾನಗಳೊಂದಿಗೆ ವಿರೋಧ ಪಕ್ಷದಲ್ಲಿತ್ತು. ಹಾಗಾಗಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.
Advertisement
ಕಳೆದ ಬಾರಿ ಒಂದೇ ಸ್ಥಾನ ಗೆದ್ದಿದ್ದ ಬಿಜೆಪಿಯಿಂದ 10 ಸ್ಥಾನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಲೋಕಸಭೆಯಲ್ಲಿ 20 ರ ಪೈಕಿ 18 ಸ್ಥಾನಗಳು ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಈ ಬಾರಿ ಅಧಿಕಾರ ರಚಿಸುವ ಪ್ರಯತ್ನದಲ್ಲಿದೆ. ಸಿ – ವೋಟರ್ ಸಮೀಕ್ಷೆ ಪ್ರಕಾರ 140 ಸದಸ್ಯರ ವಿಧಾನಸಭೆಯಲ್ಲಿ 82 ಸ್ಥಾನಗಳನ್ನು ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತೊಮ್ಮೆ 56 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ತಮಿಳುನಾಡು:
ಒಟ್ಟು 234 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ತಮಿಳುನಾಡಿನ 88,937 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 3,998 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಕರೂರು ಒಂದೇ ಕ್ಷೇತ್ರದಿಂದ 77 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 537 ಮತಗಟ್ಟೆಗಳನ್ನು ನಿರ್ಣಾಯಕ ಮತ್ತು 10,813 ದುರ್ಬಲ ಎಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 23,200 ಸಿಬ್ಬಂದಿ, 16,350 ಗೃಹರಕ್ಷಕರು ಮತ್ತು ಇತರ ರಾಜ್ಯಗಳ ಮಾಜಿ ಸೈನಿಕರು, ತಮಿಳುನಾಡಿನ 12,411 ಗೃಹರಕ್ಷಕರು ಮತ್ತು ರಾಜ್ಯ ಪೊಲೀಸರು 74,162 ಮಂದಿ ಸೇರಿ ಒಟ್ಟು 1,58,263 ಪೊಲೀಸ್ ಮತ್ತು ಪೊಲೀಸ್ ರಹಿತ ಪಡೆಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಡಿಎಂಕೆ ಜೊತೆಗೆ ಕಾಂಗ್ರೆಸ್, ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ನಟ ಕಮಲ ಹಾಸನ್ ನೇತೃತ್ವದಲ್ಲಿ 154 ಸ್ಥಾನಗಳಲ್ಲಿ ಎಂಎನ್‍ಎಂ ಸ್ಪರ್ಧೆ ಮಾಡಿದೆ. 2016 ರಲ್ಲಿ 178 ರಲ್ಲಿ ಸ್ಪರ್ಧಿಸಿ 89, 41 ರಲ್ಲಿ ಸ್ಪರ್ಧಿಸಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಎಐಎಡಿಎಂಕೆ 136 ಸ್ಥಾನಗಳು ಗೆಲ್ಲುವ ಮೂಲಕ 2016 ರಲ್ಲಿ ಅಧಿಕಾರ ರಚಿಸಿತ್ತು. ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಬಿಜೆಪಿ ಈ ಬಾರಿ ಗರಿಷ್ಠ ಸೀಟುಗಳಿಗೆ ಪ್ರಯತ್ನ ಮಾಡಿದೆ.
ಪುದುಚೇರಿ:
30 ಸ್ಥಾನಗಳ ಪೈಕಿ ರಂಗಸಾಮಿಯ ಎಐಎನ್‍ಆರ್‍ಸಿ 16, 9 ಬಿಜೆಪಿ ಮತ್ತು ನಾಲ್ಕು ಕ್ಷೇತ್ರಗಳಿಂದ ಎಐಎಡಿಎಂಕೆ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ 14 ಮತ್ತು ಡಿಎಂಕೆ 13 ಸ್ಪರ್ಧೆ, ಮೂವರು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. 10,04,197 ಮತದಾರರನ್ನು ಪುದುಚೇರಿ ಹೊಂದಿದೆ. ಎನ್‍ಡಿಎಗೆ ಸುಮಾರು 17-20 ಸ್ಥಾನಗಳು, ಕಾಂಗ್ರೆಸ್ ನೇತೃತ್ವದ ಎಸ್‍ಡಿಎ ಸುಮಾರು 9-11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಆಡಳಿರೂಢ ಕಾಂಗ್ರೆಸ್ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ
ಅಸ್ಸಾಂ
ಮೂರನೇ ಹಂತದ 40 ಕ್ಷೇತ್ರಗಳಲ್ಲಿ 337 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 20 ಸ್ಥಾನಗಳಲ್ಲಿ, ಅದರ ಮಿತ್ರರಾಷ್ಟ್ರಗಳಾದ ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 8 ಯುಪಿಪಿಎಲ್ 03 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಕಾಂಗ್ರೆಸ್ 24, ಮಿತ್ರ ಪಕ್ಷಗಳಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಎಂಟು, ಸಿಪಿಐ (ಎಂ) ಒಂದು ಸೇರಿದ ಉಳಿದ ಮಿತ್ರ ಪಕ್ಷಗಳಿಗೆ ಸ್ಥಾನ ಹಂಚಿಕೆ ಮಾಡಿಕೊಂಡಿವೆ.
11,401 ಬೂತ್ ಗಳ ನಿರ್ಮಾಣ ಮಾಡಿದ್ದು, 79,19,641 ಮತದಾರರಿದ್ದಾರೆ. ಭದ್ರತೆಗೆ 320 ಸಶಸ್ತ್ರ ಪಡೆಗಳ ನೇಮಕ ಮಾಡಲಾಗಿದೆ. ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸೇರಿ ಐವರು ಸಚಿವರು ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಭವಿಷ್ಯವನ್ನು ನಿರ್ಧಾರವಾಗಲಿದೆ. ಸಿಎಂ ರೇಸ್ ನಲ್ಲಿರುವ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್, ಬಿಜೆಪಿ ಮತ್ತು ಎಐಯುಡಿಎಫ್ ಸೇರಿ ಒಟ್ಟು 20 ಮಂದಿ ಹಾಲಿ ಶಾಸಕರ ಸ್ಪರ್ಧೆಯಲ್ಲಿದ್ದಾರೆ.
ಪಶ್ಚಿಮ ಬಂಗಾಳ
ಮೂರು ಜಿಲ್ಲೆಯ 31 ಕ್ಷೇತ್ರಗಳಿಗೆ ಮತದಾನ ಇಂದು ನಡೆಯಲಿದೆ. 78,52,425 ಮಂದಿ ಮತದಾರರಿಂದ 205 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಹಿಂದುತ್ವದ ಅಲೆ ಇರುವ ಮೂರು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಭರ್ಜರಿ ಪ್ರಚಾರ ನಡೆಸಿದ್ದರು. ಖುದ್ದು ಪ್ರಚಾರಕ್ಕೆ ಇಳಿದಿದ್ದ ದೀದಿ, ಎಡ ಪಕ್ಷಗಳಿಂದ ಮನೆ ಮನೆ ಪ್ರಚಾರ ನಡೆಸಿದ್ದರು. ಮೋದಿ ಮತ್ತು ದೀದಿ ನಡುವೆ ನೇರ ಸಂಘರ್ಷಕ್ಕೆ ಮೂರು ಜಿಲ್ಲೆಗಳಲ್ಲಿ ನಡೆಯುವ ಸಾಧ್ಯತೆಯಿದೆ.