ಬೆಂಗಳೂರು: ಇಂದು ದೇಶದಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆ ನಡೆಯಲಿದೆ.
ದೇಶಾದ್ಯಂತ 15,97,433 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕರ್ನಾಟದಲ್ಲಿ 1,19,587 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ 298 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
Advertisement
Advertisement
ಕಳೆದ ವರ್ಷ 1.15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 194 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಈಗಾಗಲೇ ವಿದ್ಯಾರ್ಥಿಗಳ ಮೊಬೈಲ್‍ಗೆ ಸಂದೇಶ ಹಾಗೂ ಇ-ಮೇಲ್ ಮೂಲಕ ರವಾನೆ ಮಾಡಲಾಗಿದೆ. ಕೊರೊನಾ ಹಿನ್ನೆಲೆ ಬೆಳಗ್ಗೆ 11ರಿಂದ 11.30ರ ಒಳಗೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗಿದೆ.
Advertisement
Advertisement
ಕೊರೊನಾ ಹಿನ್ನೆಲೆ ಮಾರ್ಗಸೂಚಿಗಳು:
* ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಬೇಕು
* ವಿದ್ಯಾರ್ಥಿಗಳಿಗೂ ಮತ್ತು ಪರೀಕ್ಷಾ ಸಿಬ್ಬಂದಿಯನ್ನು ಥರ್ಮಲ್ ಸ್ಕ್ಯಾನಿಂಗ್ ಸ್ಯಾನಿಟೈಸರ್ ವ್ಯವಸ್ಥೆ
* ವಿದ್ಯಾರ್ಥಿಗಳು ಸರಳವಾದ ಉಡುಪು ಧರಿಸಿರಬೇಕು.
* ಕಾಲಿಗೆ ಚಪ್ಪಲಿ, ಸ್ಯಾಂಡಲ್ಸ್ ಹಾಗೂ ಲೋ ಹೀಲ್ಡ್ ಚಪ್ಪಲಿಗಳನ್ನು ಮಾತ್ರ ಧರಿಸಿಬರಬೇಕು. ಶೂ ನಿಷೇಧ.
* ಪಾರದರ್ಶಕ ನೀರಿನ ಬಾಟಲು ತರಲು ಅವಕಾಶ.
* 50 ಮಿಲಿ ಲೀ. ಸ್ಯಾನಿಟೈಸರ್ ತರಲು ಅವಕಾಶ.