ಬೆಂಗಳೂರು: ಕೆಆರ್‍ಎಸ್ ಡ್ಯಾಂ ಬಿರುಕಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಸಂಸದೆ ಸುಮಲತಾ ಇಂದು ಗಣಿಗಾರಿಕೆ ಪ್ರಾಂತ್ಯ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಮಧ್ಯೆ, ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಸೂಪರಿಂಡೆಂಟ್ ಎಂಜಿನಿಯರ್ ವಿಜಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಡ್ಯಾಮ್ ಸೇಫ್ಟಿ ಬಗ್ಗೆ ಸರ್ಕಾರ, ಎಂಪಿ ಸುಮಲತಾ ಅವರಿಗೆ ವರದಿ ಕೊಡಲಾಗಿದೆ.
ಕ್ರ್ಯಾಕ್ ಬಿಟ್ಟಿದೆ ಅನ್ನೋ ವೈರಲ್ ವೀಡಿಯೋ ಬಿರುಕಿನದ್ದಲ್ಲ. ರೈತರು ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಇನ್ನು ಡ್ಯಾಂ ಬಿರುಕು ಬಿಡಲು ಅವಕಾಶವೇ ಇಲ್ಲ ಅಂತಾ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಆದರೆ ಕಲ್ಲು ಗಣಿಗಾರಿಕೆ ಮುಂದುವರಿದರೆ ಡ್ಯಾಂಗೆ ಅಪಾಯ ಎಂದಿದೆ. ಈ ಬೆನ್ನಲ್ಲೇ ಸಂಸದೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸುಮಲತಾ ಬೇಬಿ ಬೆಟ್ಟಕ್ಕೆ ಹೋಗುತ್ತಿರುವ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಚನ್ನಕೆರೆ, ಹಂಗರಹಳ್ಳಿ, ಪಾಂಡವಪುರ ತಾಲೂಕಿನ ಬೇಬಿಬೆಟ್ಟಕ್ಕೂ ಸುಮಲರಾ ಅಂಬರೀಶ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ