ಇಂದು ಗಂಡನ ಮನೆಗೆ ಹೋಗಬೇಕಿದ್ದ ನವ ವಧು ಆತ್ಮಹತ್ಯೆ

Public TV
1 Min Read
suicide

– ಮದ್ವೆಯಾದ 3 ದಿನಕ್ಕೆ ಯುವತಿ ಸೂಸೈಡ್
– ಕಿರುಚಿತ್ರದಲ್ಲಿ ನಟಿಸಿದ್ದ ಯುವತಿ

ಭೋಪಾಲ್: ಮದುವೆ ಆದ ಮೂರು ದಿನಕ್ಕೆ ನವ ವಧು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಸೀತಾನಗರದಲ್ಲಿ ಈ ಘಟನೆ ನಡೆದಿದ್ದು, ರಮ್ಯಾಶ್ರೀ (20) ಆತ್ಮಹತ್ಯೆ ಮಾಡಿಕೊಂಡು ನವ ವಧು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ದುಃಖದ ವಾತಾವರಣ ನಿರ್ಮಾಣವಾಗಿದೆ.

Marriage muslim 4

ಸೀತಾನಗರದ ಮಹಾದಾಸು ಶ್ರೀನು ಅವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನಿದ್ದಾನೆ. ಹಿರಿಯ ಮಗಳು ರಮ್ಯಾಶ್ರೀ (20) ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇಷ್ಟವಿಲ್ಲದಿದ್ದರು ಪಶ್ಚಿಮ ಗೋದಾವರಿ ಜಿಲ್ಲೆಯ ಲಕ್ಷ್ಮಣ ಈಶ್ವರಂ ಗ್ರಾಮದ ಸಂಬಂಧಿಯೊಂದಿಗೆ ಪೋಷಕರು ಬುಧವಾರ ವಿವಾಹ ಮಾಡಿಸಿದ್ದರು ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

Capture

ನವ ವಧು ರಮ್ಯಾಶ್ರೀಯನ್ನು ಇಂದು ಆಕೆಯ ಅತ್ತೆಯ ಮನೆಗೆ ಕಳುಹಿಸಬೇಕಿತ್ತು. ಆದರೆ ಶುಕ್ರವಾರ ರಮ್ಯಾಶ್ರೀ ವಿಷ ಸೇವಿಸಿದ್ದಾಳೆ. ಇದನ್ನು ನೋಡಿದ ಪೋಷಕರು ತಕ್ಷಣ ಅವಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮ್ಯಾಶ್ರೀ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದು ತಹಶೀಲ್ದಾರ್ ಸಿ.ಎಚ್.ನಾಗಲಕ್ಷ್ಮಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇತ್ತ ಗಂಡನ ಮನೆಗೆ ಕಳುಹಿಸುವ ಸಂತಸದಲ್ಲಿದ್ದ ಪೋಷಕರು ತಮ್ಮ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

marriage 1

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ರಮ್ಯಾಶ್ರೀಗೆ ಈ ಮದುವೆ ಇಷ್ಟವಿರಲಿಲ್ಲ. ಜೊತೆಗೆ ವ್ಯಾಸಂಗ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂಬ ನೋವಿನಿಂದಲೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಈ ಕುರಿತು ಸೂಕ್ತ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಮೃತಳ ಫೋನ್ ಮತ್ತು ಕಾಲ್ ವಿವರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್‍ಐ ಶಿವಪ್ರಸಾದ್ ತಿಳಿಸಿದ್ದಾರೆ.

ಮೃತ ರಮ್ಯಾ ಇತ್ತೀಚೆಗೆ ಕಿರುಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕಿರುಚಿತ್ರ ರಿಲೀಸ್ ಆಗುವ ಮುನ್ನವೇ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Police Jeep 1

Share This Article
Leave a Comment

Leave a Reply

Your email address will not be published. Required fields are marked *