-ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್‍ಗೆ ಆಂದೋಲ ಶ್ರೀ ಒತ್ತಾಯ
ಯಾದಗಿರಿ: ಎಸ್‍ಡಿಪಿಐ ಬ್ಯಾನ್ ಮಾಡುತ್ತಿರೋ ಅಥವಾ ನಿಮ್ಮ ಮನೆಗಳಿಗೆ ಬೆಂಕಿ ಇಡಿಸಿಕೊಳ್ಳುತ್ತಿರೋ ಎಂದು ಬಿಜೆಪಿ ನಾಯಕರುಗಳಿಗೆ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಜಿಲ್ಲೆಯ ಕೆಂಭಾವಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಸಿದ್ದಲಿಂಗಸ್ವಾಮೀಜಿ, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆ ತಿಕ್ಕಾಟ ನಡೆದು ಮುಸ್ಲಿಂ ಮತ ವಿಭಜನೆಗೊಂಡು ಅದು ಬಿಜೆಪಿಗೆ ಲಾಭವಾಗುತ್ತೆ ಎಂಬ ಭ್ರಮೆ ಬಿಜೆಪಿಯಲ್ಲಿದೆ. ಇಂತಹ ಭಾವನೆ ಬಿಜೆಪಿಗೆ ಇದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ ಎಂದು ಬಿಜೆಪಿ ನಾಯಕರುಗಳಿಗೆ ಎಚ್ಚರಿಸಿದರು.
ಪಿಎಫ್‍ಐ, ಎಸ್‍ಡಿಪಿಐ ಮತ್ತು ಕೆಎಫ್‍ಡಿಗೆ ಪಾಕಿಸ್ತಾನದ ಐಎಸ್‍ಐನೊಂದಿಗೆ ನಂಟಿದೆ. ಎಸ್‍ಡಿಪಿಐ ಎಂದರೇ ಮುಸ್ಲಿಂ ಲೀಗ್ ಇದ್ದಂತೆ. ಈ ಸಂಘಟನೆ ಇದ್ದರೆ ದೇಶ ಕಂಡಿತ ಮತ್ತೆ ಭಾಗವಾಗುತ್ತೆ. ಈ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂತಹವರ ವಿಚಾರದಲ್ಲಿ ಮುಖ್ಯ ಮಂತ್ರಿಗಳು ಮೃಧು ಧೋರಣೆ ಹೊಂದಿದ್ದಾರೆ. ಪಾದರಾಯನಪುರ ಘಟನೆ ನಡೆದಾಗ ಯಾರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡಬಾರದು ಎಂದು ಸಿಎಂ ಹೇಳಿದ್ದರು. ಆದರೆ ಅದರ ಮುಂದುವರಿದ ಭಾಗವೇ ಬೆಂಗಳೂರಿನ ಗಲಭೆ ಎಂದ ಶ್ರೀಗಳು ಹೇಳಿದರು. ಅಲ್ಲದೇ ಗಲಭೆಕೋರರನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.