ಬೆಂಗಳೂರು: ಇಂದಿನ ಕಲಬೆರಕೆ ಚಿನ್ನಗಳ ಮುಂದೆ 24 ಕ್ಯಾರೆಟ್ ಚಿನ್ನವಿದ್ದಂತೆ ಎಂದು ಖ್ಯಾತ ಹಿರಿಯ ನಟಿ ಪಂಡರೀಬಾಯಿ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.
ಹಿರಿಯ ನಟಿ ಪಂಡರೀಬಾಯಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಕಳೆದ ದಿನ ಇವರ ಹುಟ್ಟುಹಬ್ಬ ಇತ್ತು. ಹೀಗಾಗಿ ಅವರನ್ನು ನೆನಪಿಸಿಕೊಂಡ ನಟ ಜಗ್ಗೇಶ್ ಅವರನ್ನು 24 ಕ್ಯಾರೆಟ್ ಚಿನ್ನವಿದ್ದಂತೆ. ಅದರ ಬೆಲೆ ಇಂದಿನ ಕಲಬೆರಕೆ ಚಿನ್ನಗಳ ಮುಂದೆ ಮಂಕಾಗಿ ನೆಪಕ್ಕೆ ಕಾಣುತ್ತದೆ ಎಂದು ಹೇಳಿಕೊಂಡಿದ್ದಾರೆ.
ನಟಿ ಜಗ್ಗೇಶ್ ಪಂಡರೀಬಾಯಿ ಬಗ್ಗೆ ಟ್ವೀಟ್ ಮಾಡಿದ್ದು, “ಧನ್ಯವಾದ ನೆನಪು ಮಾಡಿಕೊಟ್ಟಿದ್ದಕ್ಕೆ, ಮನಸ್ಸುಗಳು ಮರೆತಿರಬಹುದು. ಇತಿಹಾಸ ಇವರ ಮರೆಯಲು ಬಿಡೋಲ್ಲಾ. ಹಿರಿಯ ಕಲಾವಿದರು ಆ ಕಾಲದ 24 ಕ್ಯಾರೆಟ್ ಚಿನ್ನವಿದ್ದಂತೆ. ಅದರ ಬೆಲೆ ಇಂದಿನ ಕಲಬೆರಕೆ ಚಿನ್ನಗಳ ಮುಂದೆ ಮಂಕಾಗಿ ನೆಪಕ್ಕೆ ಕಾಣುತ್ತದೆ. ಆದರೆ ಅಭಿಮಾನಿ ಹೃದಯದಲ್ಲಿ ಮಿನುಗುವ ತಾಕತ್ತು ಇಂದಿಗೂ ಇರುವುದು 24 ಕ್ಯಾರೆಟ್ ಮಾತ್ರ. ಅಮ್ಮ ಐ ಲವ್ ಯೂ” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
13ನೇ ವಯಸ್ಸಿನಲ್ಲೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ನಟಿ ಪಂಡರೀಬಾಯಿ ನಂತರ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿಗಳಿಸಿದ್ದಾರೆ. ಇವರು ದಕ್ಷಿಣ ಭಾರತೀಯ ಸಿನಿಮಾರಂಗದ ಬಹುತೇಕ ಖ್ಯಾತ ನಟರಿಗೆ ಪಂಡರೀಬಾಯಿ ನಾಯಕಿಯಾಗಿ, ತಾಯಿಯಾಗಿ ಅಭಿನಯಿಸಿದ್ದಾರೆ. ಸುಮಾರು 60 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಪಂಡರೀಬಾಯಿ 1500 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ 2003 ಜನವರಿಯಲ್ಲಿ ಪಂಡರೀಬಾಯಿ ಕೊನೆಯುಸಿರೆಳೆದಿದ್ದಾರೆ.