– 2 ವರ್ಷದ ಬಳಿಕ ಪುನೀತ್ ಚಿತ್ರ ಬಿಡುಗಡೆ
– ಬಹುತೇಕ ಚಿತ್ರಮಂದಿರಗಳಲ್ಲಿ 3 ದಿನಗಳ ಟಿಕೆಟ್ ಸೋಲ್ಡೌಟ್
ಬೆಂಗಳೂರು: ಇಂದಿನಿಂದ ಥಿಯೇಟರ್‌ಗಳಲ್ಲಿ `ಯುವರತ್ನ’ನ ಅಬ್ಬರ ಆರಂಭವಾಗಿದೆ. ಲಾಕ್‍ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮತ್ತೊಂದು ಬಿಗ್ ಬಜೆಟ್ ಮೂವಿ ಇದಾಗಿದ್ದು, 2 ವರ್ಷಗಳ ಬಳಿಕ ಪುನೀತ್ ಚಿತ್ರ ಬಿಡುಗಡೆಯಾಗಿದೆ.
ಪೊಗರು, ರಾಬರ್ಟ್ ಬಳಿಕ ತೆರೆ ಮೇಲೆ `ಯುವರತ್ನ’ ಅಬ್ಬರ ಜೋರಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಥಿಯೇಟರ್‌ಗಳಿಗೆ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದು, ಅಪ್ಪು ಕಟೌಟ್‍ಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಬಹುತೇಕ ಚಿತ್ರಮಂದಿರಗಳಲ್ಲಿ 3 ದಿನಗಳ ಟಿಕೆಟ್ ಸೋಲ್ಡೌಟ್ ಆಗಿದೆ.
Advertisement
Advertisement
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸುಮಾರು 600 ಥಿಯೇಟರ್‌ಗಳ ಜೊತೆ ವಿದೇಶಗಳಲ್ಲೂ ‘ಯುವರತ್ನ’ನ ಆಟ ಆರಂಭವಾಗಿದೆ. ರಾಜ್ಯದಲ್ಲೇ 400ಕ್ಕೂ ಹೆಚ್ಚು ಥಿಯೇಟರ್‌ಗೆ ಯುವರತ್ನ ಲಗ್ಗೆ ಇಟ್ಟಿದ್ದಾನೆ.
Advertisement
ಬಳ್ಳಾರಿ ಜಿಲ್ಲೆಯಲ್ಲಿ ನೂರಾರು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ 1 ಸಾವಿರ ಲೀಟರ್ ಹಾಲಿನ ಅಭಿಷೇಕ ಮಾಡಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರಿನಲ್ಲೂ ಯುವರತ್ನನ ಫ್ಯಾನ್ಸ್ ಚಿತ್ರವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕೆಂದು ಪಣ ತೊಟ್ಟಿದ್ದಾರೆ. ಥಿಯೇಟರ್ ಮುಂಭಾಗ ಬೃಹತ್ ಕಟೌಟ್ ಕಟ್ಟಿ ಸಂಭ್ರಮಿಸುತ್ತಿದ್ದಾರೆ.
Advertisement
ಸಂತೋಷ್ ಆನಂದರಾಮ್ ನಿರ್ದೇಶನದ ಪುನೀತ್, ಸಯ್ಯೇಶಾ, ಸೋನುಗೌಡ, ಡಾಲಿ ಧನಂಜಯ್, ಪ್ರಕಾಶ್ ರಾಜ್, ದಿಗಂತ್, ಸಾಯಿ ಕುಮಾರ್ ಅಭಿನಯದ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಥಮನ್ ಎಸ್ ಸಂಗೀತ ನಿರ್ದೇಶಿಸಿದ್ದಾರೆ.
ಸ್ಯಾಂಡಲ್‍ವುಡ್‍ನಲ್ಲಿ ಕೆಲದಿನಗಳಿಂದ ಹಾಡು, ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ ಯುವರತ್ನ ಟ್ರೇಲರ್ 90 ಲಕ್ಷಕ್ಕೂ ಅಧಿಕ ವ್ಯೂ ಆಗಿದೆ. ಸೂಪರ್ ಹಿಟ್ ಡೈಲಾಗ್ಸ್, ಸ್ಟಂಟ್‌ಗಳಿಂದ ಅಪ್ಪು ತಮ್ಮ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದಾರೆ.