ನವದೆಹಲಿ: ಕೋವಿಡ್ 19 ಸಮಯದಲ್ಲಿ ವಾಹನ ಖರೀದಿಸುವ ಮಂದಿಗೆ ಗುಡ್‌ನ್ಯೂಸ್. ಇಂದಿನಿಂದ ನೀವು ಕಡಿಮೆ ಬೆಲೆಗೆ ವಾಹನಗಳನ್ನು ಖರೀದಿಸಬಹುದು.
ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ದೀರ್ಘಾವಧಿ ವಿಮೆ ಮಾಡಬೇಕೆಂಬ ನಿಯಮವನ್ನು ಕೈಬಿಟ್ಟಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರುತ್ತಿದ್ದು ನೂತನ ವಾಹನಗಳ ಆನ್‌ರೋಡ್ ಬೆಲೆ ಇಳಿಕೆಯಾಗಲಿದೆ.
Advertisement
Advertisement
2018ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ಕಾರು ಸೇರಿದಂತೆ ಇತರ ವಾಹನಗಳಿಗೆ 3 ವರ್ಷ ವಿಮೆ ಕಡ್ಡಾಯವಾಗಿತ್ತು. ಇದರಿಂದ ವಾಹನ ಖರೀದಿದಾರರಿಗೆ ಸ್ವಲ್ಪ ಕಷ್ಟವಾಗಿತ್ತು. ಈಗ ವಾಹನ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಳೇ ನಿಯಮ ಮತ್ತೆ ಜಾರಿಯಾಗಿದೆ.
Advertisement
ವಾಹನಗಳಿಗೆ 1 ವರ್ಷ ವಿಮೆ ನಿಯಮ ಜಾರಿಗೆ ಬರುತ್ತಿದೆ. ಆದರೆ ಥರ್ಡ್ ಪಾರ್ಟಿ ವಿಮೆ ನಿಯಮದಲ್ಲಿ ಬದಲಾವಣೆಯಾಗಿಲ್ಲ. ದ್ವಿಚಕ್ರ ವಾಹನ 3 ವರ್ಷ ಹಾಗೂ ಕಾರು ಸೇರಿದಂತೆ ಇತರ ನಾಲ್ಕು ಚಕ್ರ ವಾಹನ ಥರ್ಡ್ ಪಾರ್ಟಿ ವಿಮೆ 3 ವರ್ಷ ಕಡ್ಡಾಯವಾಗಿದೆ.
Advertisement
ಕೋವಿಡ್ 19ನಿಂದ ಸಂಕಷ್ಟಕ್ಕೆ ಸಿಲುಕಿರುವ ಅಟೊಮೊಬೈಲ್ ಕಂಪನಿಗಳಿಗೆ ಮತ್ತು ಗ್ರಾಹಕರಿಗೆ ನೆರವಾಗಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ವಾಹನಗಳ ಬೆಲೆ ಇಂದಿನಿಂದಲೇ ಕಡಿಮೆ ಕಡಿಮೆಯಾಗಿದೆ.