– ಮದ್ಯಪ್ರಿಯರಿಗೂ ಗುಡ್ ನ್ಯೂಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಮತ್ತೆ ಆರಂಭವಾಗಿದೆ.
ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ- ವ್ಯವಹಾರ ಕಳೆದ ಐದು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಮಾರ್ಕೆಟ್ ನ ಮಳಿಗೆಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಿಲಾಗಿತ್ತು. ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶವಿರಲಿಲ್ಲ.
ಇದೀಗ ಇಂದಿನಿಂದ ಅನ್‍ಲಾಕ್ 4.0 ಜಾರಿಯಾಗುತ್ತಿದ್ದು, ಕೆ.ಆರ್ ಮಾರ್ಕೆಟ್ ಬೀದಿ ಬದಿಯ ವ್ಯಾಪರ ಬಲು ಜೋರಾಗಿದೆ. ಮಾರ್ಕೆಟ್ ಹೊರಗಡೆ ಸಾಮಾಜಿಕ ಅಂತರ ಮರೆತು ಕಿಕ್ಕಿರಿದ ಜನ ಸಂದಣಿಯ ಮಧ್ಯೆ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಇತ್ತ ಮದ್ಯಪ್ರಿಯರಿಗೆ ಶುಭ ಮಂಗಳವಾರ ಎಂದೇ ಹೇಳಬಹುದು. ಇಂದಿನಿಂದ ಪಬ್, ರೆಸ್ಟೋರೆಂಟ್ ತೆರೆಯಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ ಐದು ತಿಂಗಳಿಂದ ಬಾರ್, ರೆಸ್ಟೋರೆಂಟ್ ಇಲ್ಲದೆ ಮದ್ಯಪ್ರಿಯರು ಕಂಗಾಲಾಗಿದ್ದರು. ರಾಜ್ಯ ಅಬಕಾರಿ ಇಲಾಖೆ ಕೂಡ ಬಾರ್, ರೆಸ್ಟೋರೆಂಟ್, ಪಬ್ ಗಳಿಗೆ ಅನುಮತಿ ನೀಡಿದೆ. ಸದ್ಯ ಇಂದಿನಿಂದ ಬಾರ್, ಪಬ್, ರೆಸ್ಟೋರೆಂಟ್ ಇರಲಿದ್ದು, ಟೇಬಲ್ ಸರ್ವಿಸ್ ಕೂಡ ಇರಲಿದೆ.
ಸಾಮಾಜಿಕ ಅಂತರ, ಟೇಬಲ್ ನಲ್ಲಿ ನಿಗದಿತ ಮಂದಿ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ರೆಸ್ಟೋರೆಂಟ್ ಗಳಲ್ಲಿ ಸರ್ವಿಸ್ ನೀಡುವ ಮಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.