– ಇದುವರೆಗೂ ಎಷ್ಟು ಖರ್ಚಾಗಿದೆ ಲೆಕ್ಕ ಕೊಡಿ
ಮೈಸೂರು: ಶಾಸಕ ಸರಾ ಮಹೇಶ್, ಜಿಟಿ ದೇವೇಗೌಡ ಅವರು ರೋಹಿಣಿ ಸಿಂಧೂರಿ ವಿರುದ್ಧ ನೇರವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಗಿಲ್ಲ, ಖರ್ಚು ಮಾಡ್ದಿದೀರಾ ಎಂಬುದನ್ನು ಲೆಕ್ಕ ಕೊಡಿ ಸರ್ಕಾರಕ್ಕೆ ಜನರಿಗೆ ಗೊತ್ತಾಗಲಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ್ಗಾವಣೆ ಮಾಡಿಸೋದು ಅತ್ಯಂತ ಸಣ್ಣ ಕೆಲಸ, ನನಗೆ ಆ ತಾಕತ್ ಬೇಡ: ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು
Advertisement
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಪಿಎಂ ಕೇರ್ ನಿಂದ ಮೈಸೂರಿಗೆ ಬಂದ 40 ವೆಂಟಿಲೇಟರ್‍ಗಳನ್ನ ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾ ಅಧಿಕಾರಿಗಳ ವೈಫಲ್ಯ ತೋರಿಸುತ್ತದೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯ ಅಸಹಕಾರ ಹೇಗಾಗುತ್ತೆ? ವೆಂಟಿಲೇಟರ್ ಅಳವಡಿಸಿ ಎಂದು ಹೇಳಿದರೆ ತಪ್ಪಾ? ಇದನ್ನು ನಾವು ಕೇಳಬಾರದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಾಕತ್ ಇದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸಲಿ- ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು
Advertisement
Advertisement
ಸಿಎಂ ಯಡಿಯೂರಪ್ಪ ಅವರು ಕೋವಿಡ್ ರೋಗಿಗಳಿಗೆ ನೆರವಾಗೆಲೆಂದು ಸ್ಟೆಪ್ ಡೌನ್ ಅಸ್ಪತ್ರೆ ತೆರೆಯಲು ಹೇಳಿದ್ದರು. ಖಾಸಗಿ ಆಸ್ಪತ್ರೆಯವರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. ಮೈಸೂರಿನಲ್ಲಿ ನಾಯಿಕೊಡೆಗಳಂತೆ ಸ್ಟೆಪ್ ಡೌನ್ ಆಸ್ಪತ್ರೆ ನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಅವರು ಇದರ ಭ್ರಷ್ಟಾಚಾರ ಪತ್ತೆಹಚ್ಚುವ ತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆಗೆ ಅನುಮತಿ ನೀಡಿದ್ದೀರಾ? ಮೊದಲು ಅದಕ್ಕೆ ಉತ್ತರ ಕೊಡಿ..ಇದರಲ್ಲಿ ನಿಮ್ಮ ಸ್ವಹಿತಾಸಕ್ತಿ ಇದೆಯಾ? ಎಂದು ಜಿಲ್ಲಾಧಿಕಾರಿಗಳನ್ನು ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ
ಜನ ಸಂಕಷ್ಟದಲ್ಲಿ ಇರುವಾಗ ಸರ್ಕಾರದ 28 ಲಕ್ಷ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳುವವರಿಂದ ಜನಪ್ರತಿನಿಧಿಗಳು ಬುದ್ದಿ ಕಲಿಯುವ ಅಗತ್ಯವಿಲ್ಲ. ಸ್ವಿಮಿಂಗ್ ಪುಲ್ ಕಟ್ಟಲು ನೀವು ಯಾವ ನಿಯಮ ಅನುಸರಿಸಿದ್ದಿರಾ? ಪಾರಂಪರಿಕ ಇಲಾಖೆ ಅನುಮತಿ, ಮೈಸೂರು ನಗರ ಪಾಲಿಕೆಯ ಅನುಮತಿ ಪಡೆದು ಕಟ್ಟಿಸಿದ್ದೀರಾ? ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಎನ್ನುತ್ತೀರಾ ಆದರೆ, ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳಲು ಇದು ಯಾವುದು ಬೇಡ್ವಾ? ಕೋವಿಡ್ ನಿರ್ವಹಣೆಗೆ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ. ಯಾವುದಕ್ಕೆ ಎಷ್ಟು ಖರ್ಚು ಮಾಡ್ದಿದೀರಾ ಎಂಬುದನ್ನು ಲೆಕ್ಕ ಕೊಡಿ ಸರಕಾರಕ್ಕೆ ಜನರಿಗೆ ಗೊತ್ತಾಗಲಿ. ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಮುಕ್ತ ವಾರ್ಡ್‍ಗೆ ವಿಶೇಷ ಪ್ಯಾಕೇಜ್-ರೋಹಿಣಿ ಸಿಂಧೂರಿ ಘೋಷಣೆ