ಚಿಕ್ಕಮಗಳೂರು: ತಾಲೂಕಿನ ಗೌಡನಹಳ್ಳಿಯ ಮೂರು ವರ್ಷದ ಬಾಲಕ ಎಸ್.ಭುವನ್ 2021ರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿ ದಾಖಲೆ ಬರೆದಿದ್ದಾನೆ.
ತಾಲೂಕಿನ ಗೌಡನಹಳ್ಳಿ ಗ್ರಾಮದ ಶಿವ ಹಾಗೂ ದೀಪಿಕಾ ದಂಪತಿಯ ಮಗ ಎಸ್.ಭುವನ್ ಚಿಕ್ಕ ವಯಸ್ಸಿನಲ್ಲೇ ಕನ್ನಡ, ಹಿಂದಿ ಇಂಗ್ಲಿಷ್‍ನಲ್ಲಿ 1 ರಿಂದ 20ರ ವರೆಗಿನ ನಂಬರ್, 1 ಮತ್ತು 2ರ ಟೇಬಲ್ಸ್, ತಿಂಗಳು, ಕನ್ನಡ ಕಾಗುಣಿತ, ಇಂಗ್ಲಿಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, ಐತಿಹಾಸಿಕ ಸ್ಥಳಗಳು, ರಾಷ್ಟ್ರಧ್ವಜದ ಚಿಹ್ನೆಗಳು ಹಾಗೂ ಕನ್ನಡ, ಇಂಗ್ಲೀಷ್ ಭಾಷಾಂತರ ಸೇರಿದಂತೆ ಅನೇಕ ವಿಷಯಗಳ ಜ್ಞಾನವನ್ನು ಹೊಂದಿದ್ದಾನೆ. ಕಿರಿಯ ವಯಸ್ಸಿನಲ್ಲೇ ಈತನ ಈ ಜ್ಞಾಪಕ ಶಕ್ತಿಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿದೆ.
Advertisement
ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 8 ವರ್ಷದ ಬಾಲಕಿhttps://t.co/vUxo9Nrly2#IndiaBookofRecord #Haveri #KannadaNews
— PublicTV (@publictvnews) June 27, 2021
Advertisement
ಬಾಲಕ ಭುವನ್ ತಂದೆ ಹಾಲು ವ್ಯಾಪಾರಿಯಾಗಿದ್ದು, ತಾಯಿ ಗೃಹಿಣಿ. ಇಬ್ಬರೂ ಪಿಯುಸಿಯಲ್ಲಿ ಫೇಲಾಗಿದ್ದಾರೆ. ಆದರೆ ಚಿಕ್ಕಂದಿನಿಂದಲೇ ಮಗನ ಓದಿನ ಮೇಲೆ ಇಬ್ಬರೂ ವಿಶೇಷ ಗಮನ ಹರಿಸಿದ್ದರು. ಆತನಿಗೆ ಊಟ ಮಾಡಿಸುವಾಗ, ಆಟ ಆಡಿಸುವಾಗ, ಆತನ ಮೂಡ್ ಚೆನ್ನಾಗಿದ್ದು, ಹೇಳಿದ ಮಾತನ್ನೆಲ್ಲ ಗ್ರಹಿಸುವಾಗ ಅವನಿಗೆ ಹೇಳಿದ ಎಲ್ಲ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಇಂದು ಈ ಸಾಧನೆಗೈದಿದ್ದಾನೆ.
Advertisement
ಹೆತ್ತವರು ಇಡೀ ದಿನದಲ್ಲಿ ಈ ರೀತಿ ಒಂದು ಗಂಟೆ ಕಾಲ ಆತನಿಗೆ ಎಲ್ಲ ವಿಷಯಗಳನ್ನ ಹೇಳಿದ್ದಾರೆ. ಅದನ್ನೆಲ್ಲಾ ನೆನಪಿನಲ್ಲಿ ಇಟ್ಟುಕೊಂಡಿದ್ದಾನೆ. ಎಳೆ ಬಾಲಕನ ಈ ಸಾಧನೆಯನ್ನು ಜಿಲ್ಲೆಯ ಜನ ಕೂಡ ಪ್ರಶಂಸಿದ್ದಾರೆ.