ಲಂಡನ್: ಭಾರತ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಫೈನಲ್ ಸೋತ ಬಳಿಕ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿಮಾಡಿಕೊಳ್ಳುತ್ತಿದೆ. ಈ ನಡುವೆ ಇದೀಗ ಭಾರತ ತಂಡದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
Advertisement
ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ ಆಡಲಿದೆ. ಆದರೆ ಇದೀಗ ಸರಣಿ ಆರಂಭಕ್ಕೂ ಮೊದಲೇ ತಂಡದ ಅರಂಭಿಕ ಆಟಗಾರ ಶುಭಮನ್ ಗಿಲ್ ಗಾಯಗೊಂಡು ಮಹತ್ವದ ಪಂದ್ಯದಿಂದ ಹೊರಬಿದ್ದಿದ್ದಾರೆ. ಇವರಿಗೆ ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಈಗಾಗಲೇ ತಂಡದಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ವರದಿಯಾಗಿದೆ.
Advertisement
Advertisement
ಗಿಲ್ ಗಾಯಗೊಂಡರೂ ಕೂಡ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲಿದ್ದಾರೆ. ಇದೀಗ ಗಿಲ್ ಅವರ ಸ್ಥಾನವನ್ನು ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರಲ್ಲಿ ಒಬ್ಬರು ತುಂಬುವ ಭರವಸೆ ಇದೆ, ಈ ಇಬ್ಬರಲ್ಲಿ ಒಬ್ಬರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದನ್ನೂ ಓದಿ: ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ
Advertisement
ಗಿಲ್ ಈಗಾಗಲೇ ಭಾರತ ತಂಡದ ಪರವಾಗಿ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಿ 31.84ರ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 414 ರನ್ ಸಿಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಕೂಡ ಆರಂಭಿಕರಾಗಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಎರಡು ಇನ್ನಿಂಗ್ಸ್ ಸೇರಿ ಒಟ್ಟು 36 ರನ್ ಗಳಿಸುವ ಮೂಲಕ ವಿಫಲತೆ ಅನುಭವಿಸಿದ್ದರು.
ಗಿಲ್ ಅವರ ಬದಲಿಗೆ ಇದೀಗ ತಂಡದಲ್ಲಿ ಸ್ಥಾನ ಪಡೆದಿರುವ ಅಭಿಮನ್ಯು ಈಶ್ವರನ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 54 ಪಂದ್ಯಗಳಿಂದ 13 ಶತಕ ಮತ್ತು 18 ಅರ್ಧಶತಕ ಸಹಿತ 4401ರನ್ ಗಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4 ರಂದು ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭಗೊಳ್ಳಲಿದೆ.