ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊರಕ್ಕೆ

Public TV
1 Min Read
MAYANK AGARWAL 1

ಲಂಡನ್: ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ತಲೆಗೆ ಚೆಂಡು ಬಡಿದ ಕಾರಣ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊರ ನಡೆದಿದ್ದಾರೆ.

Mayank agarwal 1

ಮಯಾಂಕ್ ನೆಟ್ಸ್‌ನಲ್ಲಿ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಗೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಸಿರಾಜ್ ಎಸೆದ ಶಾರ್ಟ್ ಬಾಲ್ ಒಂದು ಅಗರ್ವಾಲ್ ಅವರ ಹೆಲ್ಮೆಟ್‍ಗೆ ತಾಗಿ ತಲೆಗೆ ಗಾಯಾವಾಗಿದೆ. ಇದನ್ನೂ ಓದಿ: ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಇಂಗ್ಲೆಂಡ್‍ಗೆ ಕಳುಹಿಸುವುದರಲ್ಲಿ ಯಾವುದೇ ಬದಲಾವಣೆ ಇಲ್ಲ: ಜೇ ಶಾ

Mayank Agarwal

ಈ ಕುರಿತು ಸ್ಪಷ್ಟಪಡಿಸಿರುವ ಬಿಸಿಸಿಐ, ತಂಡದ ಆರೋಗ್ಯ ಸಿಬ್ಬಂದಿ ಅಗರ್ವಾಲ್ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದು, ಮೊದಲ ಟೆಸ್ಟ್‌ನಿಂದ ಅವರು ಹೊರಗುಳಿಯಲಿದ್ದಾರೆ ಎಂದು ಟ್ವೀಟ್ ಮಾಡಿದೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಆರಂಭವಾಗಲಿದ್ದು, ಈಗಾಗಲೇ ಗಾಯದಿಂದಾಗಿ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಹೊರ ನಡೆದಿದ್ದಾರೆ. ಇದೀಗ ತಂಡದ ಆರಂಭಿಕ ಆಟಗಾರ ಅಗರ್ವಾಲ್ ಕೂಡ ಒಂದು ಪಂದ್ಯದಿಂದ ಹೊರಗುಳಿಯುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *