ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನ ಭಾರತ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಕರ್ಷಕ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಇದರೊಂದಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ 89 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
Advertisement
ಮೊದಲ ದಿನದಾಟದ ಅಂತ್ಯಕ್ಕೆ 24 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನ ರೋಹಿತ್ ಶರ್ಮಾ 49 ರನ್(144 ಎಸೆತ, 7 ಬೌಂಡರಿ), ವಾಷಿಂಗ್ಟನ್ ಸುಂದರ್ 60 ರನ್ ( 117 ಎಸೆತ 8ಬೌಂಡರಿ) ಮತ್ತು ರಿಷಬ್ ಪಂತ್ 101 ರನ್( 118 ಎಸೆತ, 13 ಬೌಂಡರಿ, 2 ಸಿಕ್ಸರ್ ) ಸಿಡಿಸುವ ಭಾರತಕ್ಕೆ ಚೇತರಿಕೆ ನೀಡಿದರು.
Advertisement
Advertisement
ಒಂದು ಹಂತದಲ್ಲಿ 146 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ಸುಂದರ್ 7ನೇ ವಿಕೆಟ್ 113 ರನ್ ಒಟ್ಟುಗೂಡಿಸಿ ಭಾರತದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಿದರು. ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 294 ಗಳಿಸಿದೆ. ಭಾರತ ಪರ ವಾಷಿಂಗ್ಟನ್ ಸುಂದರ್ 60 (117 ಎಸೆತ, 8 ಬೌಂಡರಿ) ಮತ್ತು ಅಕ್ಷರ್ ಪಟೇಲ್ 11 ರನ್ (34 ಎಸೆತ, 2 ಬೌಂಡರಿ) ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ.
Advertisement
It's Stumps on Day 2 of the 4⃣th @Paytm #INDvENG Test! #TeamIndia 294/7, lead England by 89 runs. @RishabhPant17 1⃣0⃣1⃣@Sundarwashi5 6⃣0⃣*
Scorecard ???? https://t.co/9KnAXjaKfb
Join us tomorrow for Day 3⃣ action! pic.twitter.com/oRbJ569oZK
— BCCI (@BCCI) March 5, 2021
ಇಂಗ್ಲೆಂಡ್ ಪರ ವೇಗಿ ಜೇಮ್ಸ್ ಆ್ಯಂಡರ್ಸನ್ 3 ವಿಕೆಟ್ ಪಡೆದರೆ, ಬೆನ್ ಸ್ಟೋಕ್ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಕಿತ್ತರು.