ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 8 ವಿಕೆಟ್ ಅಂತರದಿಂದ ಗೆದ್ದು ಬೀಗಿದೆ.
England win the first @Paytm #INDvENG T20I by 8 wickets. #TeamIndia will be looking to bounce back & level the series in the 2nd T20I.
Scorecard ???? https://t.co/XYV4KmdfJk pic.twitter.com/THSEAxWoFr
— BCCI (@BCCI) March 12, 2021
Advertisement
ಟೆಸ್ಟ್ ಪಂದ್ಯವನ್ನು 3-1 ಅಂತರದಿಂದ ಗೆದ್ದಿದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೋಟೆರಾ ಅಂಗಳದಲ್ಲಿ ಕಣಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಪವರ್ ಪ್ಲೇ ಮುಗಿಯುವ ಮೊದಲೇ ಕೆ.ಎಲ್ ರಾಹುಲ್, 1 ರನ್, ಕೊಹ್ಲಿ 0, ಧವನ್ 4 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ನಂತರ ಬಂದ ರಿಷಬ್ ಪಂತ್ ಸಿಡಿಯುವ ಸೂಚನೆ ನೀಡಿದರು ಕೂಡ ಅವರ ಆಟ 21ರನ್( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಕೊನೆಗೊಂಡಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆಕರ್ಷಕ 67 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು.
Advertisement
5⃣0⃣ & going strong! ????????
3⃣rd T20I half-century for @ShreyasIyer15 in 36 balls! ???????? @Paytm #INDvENG #TeamIndia move closer to 100.
Follow the match ???? https://t.co/XYV4KmdfJk pic.twitter.com/nH1H70xI0X
— BCCI (@BCCI) March 12, 2021
Advertisement
125 ರನ್‍ಗಳ ಗುರಿ ಪಡೆದು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿ ಜೋಸನ್ ರಾಯ್ ಮತ್ತು ಜೋಸ್ ಬಟ್ಲರ್ ಸ್ಪೋಟಕ 72 ರನ್‍ಗಳ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಚಹಾಲ್, 28ರನ್( 24 ಎಸೆತ,2 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಬಟ್ಲರ್ ಅವರ ವಿಕೆಟ್ ಪಡೆದರು. ನಂತರ ಜೋಸನ್ ರಾಯ್ 49 ರನ್( 32 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ, ನಂತರ ಬಂದ ಡೇವಿಡ್ ಮಲಾನ್ 24 ರನ್( 20 ಎಸೆತ,2 ಬೌಂಡರಿ, 1 ಸಿಕ್ಸರ್) ಮತ್ತು ಜಾನಿ ಬೈರ್ಸ್ಟೋವ್ 26 ರನ್( 17 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಇಂಗ್ಲೆಂಡ್ 15.3 ಬೌಲರ್‌ಗಳಲ್ಲಿ ಇನ್ನು 27 ಎಸೆತ ಬಾಕಿ ಇರುವಂತೆ 130 ರನ್‍ಗಳಿಸಿ ಭಾರತ ವಿರುದ್ಧ ಭರ್ಜರಿ ಜಯ ಗಳಿಸಿತು.
Advertisement