ಲಂಡನ್: ಕೊರೊನಾ ಹೊಸ ರೂಪಕ್ಕೆ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಟಯರ್ 4 ಲಾಕ್‍ಡೌನ್ ವಿಧಿಸಿ ಪ್ರಧಾನಿ ಬೋರಿಸ್ ಜಾನ್ಸಸ್ ಆದೇಶಿಸಿದ್ದಾರೆ. ಕ್ರಿಸ್‍ಮಸ್ ಹೊತ್ತಲ್ಲಿ ಕಠಿಣ ಲಾಕ್‍ಡೌನ್ ಹೇರಿ ಕೊರೊನಾದಿಂದ ಪಾರಾಗಲು ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.
ಕೊರೊನಾ ವೈರಸ್ ರೂಪಾಂತರದಿಂದ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್ ವಿಧಿಸಲಾಗಿದೆ. ಸುದ್ದಿಗೋಷ್ಠಿ ನಡೆಸಿ ಬೋರಿಸ್ ಜಾನ್ಸಸ್ ಕಠಿಣವಾದ ‘ಟಯರ್ 4’ ಲಾಕ್‍ಡೌನ್ ವಿಧಿಸಿರುವ ಬಗ್ಗೆ ಮಾಹಿತಿ ನಿಡಿದ್ದಾರೆ. ಸೋಮವಾರ ಕೊರೊನಾ ರೂಪಾಂತರದ ಬಗ್ಗೆ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊ.ಕ್ರಿಸ್ ವಿಟ್ಟಿ ಈ ಕುರಿತು ಮಾಹಿತಿ ನೀಡಿದ್ದು, ರೂಪಾಂತರಗೊಂಡಿರುವ ವೈರಸ್ ಬಹುಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement
Advertisement
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ವೈರಸ್ ಕುರಿತು ತಿಳಿಯಲು ಲಭ್ಯವಿರುವ ಅಂಕಿಗಳನ್ನು ಆಧರಿಸಿ ಹೆಚ್ಚು ತಿಳಿಯಲಾಗುತ್ತಿದೆ. ಅಲ್ಲದೆ ಹೊಸ ವೈರಸ್ ಒತ್ತಡದಿಂದ ಹೆಚ್ಚು ಸಾವು ಸಂಭವಿಸುತ್ತದೆ ಅಥವಾ ಲಸಿಕೆ ಹಾಗೂ ಚಿಕಿತ್ಸೆಗೆ ಸ್ಪಂದಿಸಲಿದೆ ಎಂಬುದನ್ನು ತಿಳಿಸಲು ಯಾವುದೇ ಪುರಾವೆಗಳಿಲ್ಲ. ಇದನ್ನು ಪತ್ತೆಹಚ್ಚಲು ತುರ್ತು ಕೆಲಸ ನಡೆಯುತ್ತಿದೆ ಎಂದು ಕ್ರಿಸ್ ವಿಟ್ಟಿ ಮಾಹಿತಿ ನೀಡಿದ್ದಾರೆ.
Advertisement
ಈ ಕುರಿತು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದ್ದು, ತುರ್ತಾಗಿ ಮಾಡಬೇಕಿರುವುದು ಸವಾಲಿನ ಕೆಲಸವಾಗಿದೆ. ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿಲ್ಲ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಕಠಿಣ ಲಾಕ್‍ಡೌನ್ ಹೇರಿದ್ದರೆ ಕಡಿಮೆ ಸೋಂಕಿತರು ಇರುವ ಪ್ರದೇಶಗಳಲ್ಲಿ ಕೆಲ ವಿನಾಯಿತಿ ನೀಡಲಾಗಿದೆ.
Advertisement
Because the point is we were going into this where London wasn’t in a good place to resist this new strain
Q1) Why was London, where cases were already high- put into T2 when lockdown ended? See graph below. Cases were already climbing during the end of lockdown itself. pic.twitter.com/u5AEScIyB3
— Lewis Goodall (@lewis_goodall) December 19, 2020
ಹೊಸ ಲಾಕ್‍ಡೌನ್ ನಿಯಮದ ಪ್ರಕಾರ ಲಂಡನ್‍ನಂತಹ ಪ್ರದೇಶದಲ್ಲಿರುವವರು ಕ್ರಿಸ್‍ಮಸ್‍ಗಾಗಿ ತಮ್ಮ ಮನೆಗಳಿಗೆ ತೆರಳುವಂತಿಲ್ಲ. ಟಯರ್ 1-3 ಲಾಕ್‍ಡೌನ್ ಇರುವ ಪ್ರದೇಶದ ಜನರು ಗರಿಷ್ಟ 3 ಮನೆಗಳಿಗೆ ಮಾತ್ರ ತೆರಳಬಹುದಾಗಿದೆ ಎಂದು ಇಂಗ್ಲೆಂಡ್ ಪ್ರಧಾನಿ ತಿಳಿಸಿದ್ದಾರೆ.
ಕಠಿಣ ಲಾಕ್‍ಡೌನ್ ನಿಯಮ ಏನು?
ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್ ಪ್ರದೇಶಗಳಲ್ಲಿ ಕಠಿಣ ಲಾಕ್‍ಡೌನ್ ಹೇರಲಾಗಿದೆ. ಇದರಿಂದಾಗಿ ಕೊರೊನಾ ವೈರಸ್‍ನ ರೂಪಾಂತರದ ಆರ್ಭಟವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ನಿರ್ಬಂಧಗಳ ವ್ಯಾಪಕ ಪರಿಶೀಲನೆಯ ಭಾಗವಾಗಿ ಡಿಸೆಂಬರ್ 10ರಂದು ಎರಡು ವಾರಗಳ ಅವಧಿಯಲ್ಲಿ ನಿಯಮಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ.
ಕೆಲಸ, ಶಿಕ್ಷಣ, ಆರೋಗ್ಯ ಮಕ್ಕಳ ರಕ್ಷಣೆ ಹಾಗೂ ವ್ಯಾಯಾಮ ಹೊರತುಪಡಿಸಿ ಯಾರೂ ಎಲ್ಲಿಯೂ ತೆರಳುವ ಹಾಗಿಲ್ಲ. ಮನೆಯಲ್ಲೇ ಇರುವಂತೆ ನಿಯಮ ರೂಪಿಸಲಾಗಿದೆ. ಅಲ್ಲದೆ ಯಾರೂ ಸಹ ಟಯರ್ 4 ಲಾಕ್‍ಡೌನ್ ಹೇರಲಾಗಿರುವ ಪ್ರದೇಶಗಳಿಗೆ ತೆರಳದಂತೆ ಹಾಗೂ ಇಲ್ಲಿನ ವ್ಯಕ್ತಿಗಳನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ರಾತ್ರಿಯಿಡಿ ಮನೆಯಿಂದ ಹೊರಗಡೆ ಇರಬಾರದು ಎಂದು ತಿಳಿಸಲಾಗಿದೆ.
ಈ ಪ್ರದೇಶಗಳಲ್ಲಿ ಒಬ್ಬರು ಮತ್ತೊಬ್ಬರನ್ನು ಭೇಟಿಯಾಗಲು ಮಾತ್ರ ಅವಕಾಶ ನೀಡಲಾಗಿದೆ. ಸಹಾಯ, ಮಕ್ಕಳ ಆರೈಕೆ ಕೇಂದ್ರಗಳು ಹಾಗೂ ಮಕ್ಕಳನ್ನು ಬೇರ್ಪಟ್ಟ ಪೋಷಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಬೇರೆ ಕಡೆ ಇದ್ದರೆ ತಕ್ಷಣವೇ ತಮ್ಮ ನಿವಾಸಕ್ಕೆ ಮರಳುವಂತೆ ಸೂಚಿಸಲಾಗಿದೆ.
ಜಿಮ್, ಸಿನಿಮಾ ಥಿಯೇಟರ್, ಕಟಿಂಗ್ ಶಾಪ್, ಕ್ಯಾಸಿನೋ ಸೇರಿದಂತೆ ಅನಗತ್ಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು. ವಿದೇಶ ಪ್ರವಾಸಕ್ಕೆ ತೆರಳುವಂತಿಲ್ಲ. ಹೊರಾಂಗಣ ಆಟಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.