ಮೈಸೂರು: ಸಿಡಿ ಪ್ರಕರಣದ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಾಗಿದೆಯೋ ಅವರಿಂದ ರಕ್ಷಣೆ ಸಿಕ್ಕಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅವರಿಂದ ಸಿಕ್ಕಿದೆ. ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದಿದ್ದರೂ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ನನ್ನ ಅಭಿಪ್ರಾಯದಂತೆ ಆ ಹೆಣ್ಣು ಮಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದರು.
Advertisement
Advertisement
ನಿನ್ನೆ ಆ ಹೆಣ್ಣು ಮಗಳು ವಾಟ್ಸಪ್ ಮುಖಾಂತರ ವೀಡಿಯೋವನ್ನು ಕಳುಹಿಸಿದ್ದಾಳೋ ಅಥವಾ ಆ ಮುನಷ್ಯನ ಸ್ಪೀಡ್‍ಗೆ ಬ್ರೇಕ್ ಹಾಕಲು ಯಾರಾದರೂ ಸರ್ಕಾರದ ಒಳಗೆ ಇದ್ದವರೆ ಆ ಯುವತಿಗೆ ರಕ್ಷಣೆ ಕೊಟ್ಟು ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ಗೊತ್ತಿಲ್ಲ. ಆದರೆ ಒಟ್ಟಾರೆ ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದೆ ಎಂದರು.
Advertisement
ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್‍ರವರ ಹೆಸರು ಕೇಳಿ ಬರುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದೆ ಅವರು, ಡಿಕೆಶಿ ಹೆಸರು ಈ ಪ್ರಕರಣದಲ್ಲಿ ಯಾರಾದರೂ ಹೇಳಿದ್ರಾ? ಅವರ ಹೆಸರನ್ನು ಅವರೇ ಯಾಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತಾ ಯಾರಾದರೂ ಹೇಳಿದ್ರಾ? ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಜನ ಇದ್ದಾರೆ. ಬಿಜೆಪಿ ಒಳಗೆ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ. ಅವರು ಪ್ರಬುದ್ಧ ಪೊಲಿಟಿಶಿಯನ್, ನನಗಿಂತಾ ಪ್ರಬುದ್ಧ ರಾಜಕಾರಣಿ ಇಂತಹದರಲ್ಲಿ ಡಿಕೆ ಶಿವಕುಮಾರ್ ಯಾಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿಕೊಂಡರೋ ಗೊತ್ತಿಲ್ಲ ಎಂದು ಹೇಳಿದರು.
Advertisement
ಜಿಟಿ ದೇವೇಗೌಡ ವಿಚಾರವಾಗಿ, ಜಿಟಿ ದೇವೇಗೌಡರವರು ದುರಹಂಕಾರದಲ್ಲಿ ಮಾತಾಡುತ್ತಿದ್ದಾರೆ, ನಮ್ಮ ಪಕ್ಷದಿಂದ ಬೆಳೆದವರು ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ. ಆದರೂ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಜಿಟಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.