ಆ ಶಬ್ದ ಮಾತಾಡಬಾರದಿತ್ತು, ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ರಮೇಶ್ ಜಾರಕಿಹೊಳಿ

Public TV
1 Min Read
ramesh jarkiholi 2 3

– ಆ ಪದ ಹಿಂದಕ್ಕೆ ಪಡೆಯುತ್ತೇನೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿರುವ ಕುರಿತು ಈಗಲೂ ನಾನು ಬದ್ಧನಾಗಿದ್ದೇನೆ. ಆದರೆ ಗಾಂ…ಪದವನ್ನು ಬಳಸಬಾರದಿತ್ತು ಹೀಗಾಗಿ ಅವರ ಮನಸ್ಸಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಮೇಶ್ ಜಾರಿಕೊಳಿ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸಚಿವ ಸುಧಾಕರ್ ನಿವಾಸಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆಡಿದ ಆ ಪದವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಆ ಶಬ್ದ ಬಳಕೆ ಮಾಡಬಾರದಿತ್ತು, ನಾನೂ ಮನುಷ್ಯ, ಭಾವುಕನಾಗಿ ಮಾತಾಡಿದೆ. ಅಲ್ಲದೆ ಕಳೆದ 24 ದಿನಗಳಿಂದ ತೇಜೋವಧೆ ಮಾಡಲಾಗಿದೆ. ಹೀಗಾಗಿ ಆ ಪದ ಬಳಸಿದೆ ಎಂದು ತಿಳಿಸಿದರು. ಇದನ್ನೂ ಓದಿ:

ಇಂದು ತಡವಾಗಿದೆ, ನಾಳೆ ಎಸ್‍ಐಟಿಗೆ ದೂರು ಕೊಡುತ್ತೇನೆ. ರಾಜಕೀಯ ಹೇಳಿಕೆಗೆ ರಾಜಕೀಯವಾಗೇ ಉತ್ತರ ಕೊಡುತ್ತೇನೆ. ಸತತವಾಗಿ ಟಿವಿ ನೋಡಿದೆ, ಹಾಗೆ ಮಾತನಾಡಬಾರದಿತ್ತು ಎನಿಸಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:

ಡಿ.ಕೆ.ಶಿವಕುಮಾರ್ ವಿರುದ್ಧ ಆ ಪದ ಬಳಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ರಮೇಶ್ ಜಾರಕಿಹೊಳಿಯವರ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ. ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ’ ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ ಕೇಸ್ ದಾಖಲಾಗಿದ್ದರೂ, ಬಂಧಿಸದೆ ಇಂಥ ಕೀಳು ನಾಟಕ ಆಡಲು ಬಿಟ್ಟಿದ್ದೀರಾ ಎಂದು ಕಾಂಗ್ರೆಸ್ ಕಿಡಿಕಾರಿದೆ.

Share This Article
Leave a Comment

Leave a Reply

Your email address will not be published. Required fields are marked *