ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮತಾಂತರ ಸುದ್ದಿಗೆ ಪುಷ್ಠಿ ಎಂಬಂತೆ ಸಂಜನಾ ಸಿನಿಮಾ ಶೂಟಿಂಗ್ ಗೆ ಬುರ್ಖಾ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಆ ಧರ್ಮವನ್ನು ಹೊಗಳಿರುವುದು ಬೆಳಕಿಗೆ ಬಂದಿದೆ.
Advertisement
ಹೌದು, ಅಂದು ಬ್ಲಾಕ್ ಆಂಡ್ ವೈಟ್ ಫೋಟೋ ಪೋಸ್ಟ್ ಮಾಡಿದ್ದ ಸಂಜನಾ, ಇಸ್ಲಾಂ ಧರ್ಮದ ಬಗ್ಗೆ ಅತೀವ ಒಲವು ತೋರಿರುವ ಸಂಜನಾ, ಇಸ್ಲಾಂ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಪ್ರಭಾವಿತಳಾಗಿದ್ದೇನೆ. ಅಲ್ಲದೆ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಮುಸ್ಲಿಂ ಧರ್ಮವನ್ನು ಹೊಗಳಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ನಟಿ 2014ರಲ್ಲೇ ಮತಾಂತರಕ್ಕೆ ಮನಸ್ಸು ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
Advertisement
https://www.instagram.com/p/qJh3xiuY0n/
Advertisement
ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಅವರ ಹೆಸರು ಕೇಳಿ ಬಂದ ಸಮಯದಿಂದಲೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಂಧನದ ಮುನ್ನ 32 ವರ್ಷವಾದರೂ ಇನ್ನು ಮದುವೆಯೇ ಆಗಿಲ್ಲ. ನನ್ನ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ್ದರು. ಆದರೆ ಆ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ಸಾಕಷ್ಟು ವೈರಲ್ ಆಗಿತ್ತು.
Advertisement
ಡಾ. ಅಜೀಜ್ ಪಾಷಾ ಅವರ ಪರಿಚಯವಾದ ಬಳಿಕ ಪ್ರೇಮ ಪಾಶಕ್ಕೆ ಸಿಲುಕಿದ್ದ ಸಂಜನಾ ಮತಾಂತರವಾಗಿ ಮದುವೆಯಾಗಿದ್ದರು ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭಿಸಿದೆ. ಮದುವೆಯಾದ ಬಳಿಕ ಕೆಲ ಸಮಯ ವೈದ್ಯರೊಂದಿಗೆ ವಾಸವಿದ್ದರು. 7 ತಿಂಗಳ ಹಿಂದೆಯಷ್ಟೇ ಇಬ್ಬರ ನಡುವೆ ವೈಮನಸ್ಸು ಮೂಡಿದ್ದ ಕಾರಣದಿಂದ ದೂರವಾಗಿದ್ದರು. ಚಿತ್ರರಂಗದಲ್ಲಿ ಇರುವ ಕಾರಣ ತಮ್ಮ ಮದುವೆ ಹಾಗೂ ಮತಾಂತರದ ಮಾಹಿತಿಯನ್ನು ಸಂಜನಾ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ
ಸಂಜನಾ ಮದುವೆಯಾಗಿರುವ ಅಧಿಕೃತ ಮಾಹಿತಿ ಲಭಿಸಿಲ್ಲ. ಆದರೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ನನಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ನನ್ನ ಮಗ ರಾಹುಲ್ಗೆ ಪರಿಚಯವಿದ್ದು, ಸಂಜನಾ ಪತಿ ಡಾಕ್ಟರ್ ಆಗಿದ್ದು ನನಗೆ ಸಹಾಯ ಮಾಡಿದ್ರು ಎಂದು ಹೇಳಿದ್ದರು.
https://www.instagram.com/p/pIjfkbOYx2/
ತೆಲುಗು ಕಾರ್ಯಕ್ರಮ ಸಂದರ್ಶನವೊಂದರಲ್ಲಿ 2018ರಲ್ಲಿ ಮಾತನಾಡಿದ್ದ ಸಂಜನಾ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ನಾನು ಪ್ರೀತಿಸುತ್ತಿರುವ ಹುಡುಗ ಡಾಕ್ಟರ್ ಆಗಿದ್ದು, ನನ್ನ ಕುಟುಂಬದವರಿಗೂ ಪರಿಚಯವಿದೆ. ಮನೆಗೂ ಬಂದು ಹೋಗುತ್ತಾರೆ. ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಪರಿಚಯವಾಗಿದ್ದರು. ನನ್ನ ವೃತ್ತಿ ಜೀವನದ ಆರಂಭದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅವರನ್ನು ನೋಡಿದ್ದೆ, ಮೊದಲ ನೋಟದಲ್ಲೇ ಅವರ ಮೇಲೆ ಪ್ರೀತಿ ಮೂಡಿತ್ತು ಎಂದು ಸಂಜನಾ ಹೇಳಿದ್ದರು.
https://www.youtube.com/watch?v=dt5fTVectHE