– ಅಪ್ಪನ ಫೋನಿಗೆ ಬಂದ ಕರೆ ಸ್ವೀಕರಿಸಿದ ಮಗ
– ಮಗನಿಂದಾಗಿ ಹಣ ಕಳೆದುಕೊಂಡ ತಂದೆ
ಮುಂಬೈ: ಆನ್‍ಲೈನ್ ವಂಚನೆಯ ಪ್ರಕರಣವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಆ್ಯಪ್ ಇನ್‍ಸ್ಟಾಲ್ ಮಾಡಲು ಹೇಳಿ 9 ಲಕ್ಷ ದೋಚಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಅಶೋಕ್ ಮನ್ವಾಟೆ ಹಣ ಕಳೆದುಕೊಂಡ ವ್ಯಕ್ತಿ. ಘಟನೆ ಸಂಬಂಧ ಸದ್ಯ ಅಶೋಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್ ಅವರಿಗೆ ಬಂದ ಅನಾಮಧೇಯ ಕರೆಯನ್ನು 15 ವರ್ಷದ ಮಗ ಸ್ವೀಕರಿಸಿದ್ದಾನೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಮೊದಲು ತನ್ನನ್ನು ತಾನು ಪರಿಚಯಿಸಿಕೊಂಡ.
Advertisement
Advertisement
ತಾನು ಡಿಜಿಟಲ್ ಹಣ ಪಾವತಿ ಕಂಪನಿಯ ಗ್ರಾಹಕ ಆರೈಕೆಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿ ಅದಕ್ಕೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವಂತೆಯೂ ಹೇಳಿದ್ದಾನೆ. ಅಲ್ಲದೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದಾನೆ. ಆತ ಹೇಳಿದ ಕೂಡಲೇ ಬಾಲಕ ತಂದೆಯ ಮೊಬೈಲ್ ನಲ್ಲಿ ಆ್ಯಪ್ ಇನ್ ಸ್ಟಾಲ್ ಮಾಡಿಯೇ ಬಿಟ್ಟಿದ್ದಾನೆ.
Advertisement
ಬಾಲಕ ಆ್ಯಪ್ ಡೌನ್ ಲೋಡ್ ಮಾಡಿದ ಕೂಡಲೇ ಕರೆ ಮಾಡಿದ ವ್ಯಕ್ತಿ, ಬಾಲಕನ ತಂದೆಯ ಬ್ಯಾಂಕ್ ಅಕೌಂಟಿನಿಂದ 8.95 ಲಕ್ಷ ಎಗರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
Advertisement
ಘಟನೆ ಸಂಬಂಧ ಅಶೋಕ್ ದೂರು ಸ್ವೀಕರಿಸಿರುವ ಪೊಲೀಸರು ಅನಾಮಿಕನ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.