ಹುಬ್ಬಳ್ಳಿ: ಆಹಾರ ಕಿಟ್ ನೀಡುವಂತೆ ಆಗ್ರಹಿಸಿ ಬಿಜೆಪಿ ಶಾಸಕರ ಮನೆ ಮುಂದೆ ಜನಸ್ತೋಮವೇ ನೆರೆದಿದ್ದ ಪ್ರಸಂಗ ಇಂದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಂಡು ಬಂದಿತು.
ಕಲಘಟಗಿ ಮತಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರ ಮನೆ ಮುಂದೆ ಕಲಘಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಆಹಾರ ಕಿಟ್ ನೀಡುವಂತೆ ಆಗ್ರಹಿಸಿ ಜಮಾಯಿಸಿದ್ದರು. ಈ ವೇಳೆ ಮಹಿಳೆಯರು ಯಾವುದೇ ಸಾಮಾಜಿಕ ಕಾಯ್ದುಕೊಳ್ಳಲೇ ಇಲ್ಲ.
Advertisement
Advertisement
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ ಕಿಟ್‍ಗಳನ್ನು ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದರಿಂದಾಗಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. “ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್‍ಗಳನ್ನು ಕೊಡಿ” ಎಂದು ಆಗ್ರಹಿಸಿದರು.
Advertisement
ಪ್ರತಿಭಟನೆಗೆ ಮುಂದಾಗಿದ್ದ ಮಹಿಳೆಯರನ್ನು ಶಾಸಕರ ಸಹಾಯರು ತಡೆದು ವಾಪಸ್ ಕಳುಹಿಸಿದರು. ಇದರಿಂದಾಗಿ ಕೋಪಗೊಂಡ ಮಹಿಳೆಯರು, ಬಡವರಿಗೆ ವಿತರಿಸಲು ಸರ್ಕಾರ ಕೊಟ್ಟ ಆಹಾರದ ಕಿಟ್‍ಗಳನ್ನು ಇವರೇ ಹಂಚಿಕೊಂಡಿದ್ದಾರೆ. ಇವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಸಮಾಧಾನ ಹೊರಹಾಕಿ ತಮ್ಮ ಮನೆಗಳಿಗೆ ಹಿಂತಿರುಗಿದರು.