ಲಕ್ನೋ: ಕೊರೊನಾ ಸಮಯದಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅಂತಹದರಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ನಾಯಿಯೊಂದು ಬೆಡ್ ಮೇಲೆ ಬೆಚ್ಚಗೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ.
Advertisement
Advertisement
ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಆಸ್ಪತ್ರೆಯ ಈ ಅವ್ಯವಸ್ಥೆಯು ರೋಗಿಗಳ ನಿದ್ದೆಯನ್ನು ಕೆಡಿಸುತ್ತಿದೆ.
Advertisement
ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದ್ದು, ಸಿವಿಲ್ ಲೈನ್ಸ್ ಪ್ರದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement
ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಶಸ್ತ್ರಚಿಕಿತ್ಸಾ ವಾರ್ಡ್ ನಲ್ಲಿ ಬೀದಿ ನಾಯಿ ಪತ್ತೆಯಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ನಾಯಿ ಸುತ್ತಾಡುವುದು ಸಾಮಾನ್ಯವಾಗಿ ಹೋಗಿದೆ ಇದರಲ್ಲಿ ಯಾವುದೇ ರೀತಿಯ ಆಶ್ಚರ್ಯವೇನಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಮತ್ತು ಸಿಬ್ಬಂದಿಯಲ್ಲಿನ ಅಸಡ್ಡೆ ಎಲ್ಲರಿಗೂ ಕಾಣಿಸುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಜೊತೆಗೆ ಆಸ್ಪತ್ರೆಯ ಅಧಿಕಾರಿಗಳು ಆ ವಾರ್ಡ್ ನಲ್ಲಿ ಯಾರನ್ನು ದಾಖಲಿಸಿಕೊಳ್ಳದೆ ಇದ್ದರಿಂದ ಆ ಬೆಡ್ ಖಾಲಿ ಇತ್ತು. ಅದೇ ಸಮಯದಲ್ಲಿ ನಾಯಿ ಬಂದು ಕುಳಿತಿದೆ ತಿಳಿಸಿದರು. ಇನ್ನೂ ಈ ದೃಶ್ಯದ ಮೂಲಕ ಆಸ್ಪತ್ರೆ ಅವ್ಯವಸ್ಥೆ, ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದೆ.
ಈ ಹಿಂದೆ ಕರ್ನಾಟಕದ ಮಂಡ್ಯ ಜಿಲ್ಲೆಯ ಆಸ್ಪತ್ರಯೊಂದರಲ್ಲಿ ಕೂಡ ಇದೇ ರೀತಿ ಬೀದಿ ನಾಯಿಗಳು ವಾರ್ಡ್‍ವೊಂದರ ಬೆಡ್ ನಲ್ಲಿ ರಾಜಾರೋಷವಾಗಿ ವಿಶ್ರಾಂತಿಸುತ್ತಿದ್ದ ಘಟನೆ ನಡೆದಿತ್ತು. ಘಟನೆ ಕುರಿತಂತೆ ಅಲ್ಲಿನ ರೋಗಗಳು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು.