ಮೈಸೂರು: ಆಸ್ತಿಗಾಗಿ ಸಂಬಂಧಿಕರೇ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಬೆಟ್ಟದಪುರ ಗ್ರಾಮದ ಗಂಗಮ್ಮ (45) ಎಂದು ಗುರುತಿಸಲಾಗಿದೆ. ಆರೋಪಿಗಳು ಗಂಗಮ್ಮರನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಕಾವೇರಿ ನದಿಗೆ ಎಸೆದಿದ್ದಾರೆ.
ಮೃತ ಗಂಗಮ್ಮಗೆ ಮಕ್ಕಳಿಲ್ಲ. ಗಂಡ ಸತ್ತು ಹೋಗಿದ್ದಾರೆ. ಆಗಸ್ಟ್ 7 ರಿಂದ ಗಂಗಮ್ಮ ನಾಪತ್ತೆಯಾಗಿದ್ದರು. ಕೊಲೆ ಆರೋಪಿಗಳು ಮದ್ಯದ ಅಮಲಿನಲ್ಲಿ ಹತ್ಯೆ ಬಗ್ಗೆ ಮಾತನಾಡಿದ್ದಾರೆ. ವಿಚಾರ ತಿಳಿದು ಪೊಲೀಸರು ಗಂಗಮ್ಮರ ಸಂಬಂಧಿಗಳಾದ ಶಿವರಾಜ್, ರವಿಶಂಕರ್, ಕಿರಣ್, ಮಂಜು, ರಾಜೇಶ್ ಮತ್ತು ವೆಂಕಟೇಶ್ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಘಟನೆ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.