ಆಸ್ತಿಗಾಗಿ ಸಂಬಂಧಿಕರಿಂದಲೇ ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read
vijayapura mardar

ವಿಜಯಪುರ: ಜಮೀನು ವಿಚಾರವಾಗಿ ಸಂಬಂಧಿಕರ ಮಧ್ಯೆ ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.

vijayapura mardar 1

 

ಕೊಲೆಯಾದ ವ್ಯಕ್ತಿಯನ್ನು ಮಚ್ಚೇಂದ್ರ ಪಟಗಾರ (55) ಎಂದು ಗುರುತಿಸಲಾಗಿದೆ. ಮಚ್ಚೇಂದ್ರ ಪಟಗಾರ ಮತ್ತು ಅವರ ಸಂಬಂಧಿಕರ ನಡುವೆ ಆಸ್ತಿ ವಿಚಾರವಾಗಿ ಕೆಲದಿನಗಳಿಂದ ಕಿತ್ತಾಟ ನಡೆಯುತ್ತಿತ್ತು.

Police Jeep 1 2 medium

ಈ ವಿಚಾರ ತಾರಕಕ್ಕೆ ಹೋಗಿ ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಇದೀಗ ಕೊಲೆಯಾದ ಮಚ್ಚೇಂದ್ರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *