– ಗೆಳೆಯನ ಪೋಸ್ಟ್ ಗೆ ಆಥಿಯಾ ಕಮೆಂಟ್
ನವದೆಹಲಿ: ಐಪಿಎಲ್ ಬಳಿಕ ಆಸೀಸ್ ಪ್ರವಾಸದಲ್ಲಿರುವ ಕ್ರಿಕೆಟಿಗ ಕೆ.ಎಲ್.ರಾಹುಲ್ ತಮ್ಮ ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಕೆ.ಎಲ್.ರಾಹುಲ್ ಇನ್‍ಸ್ಟಾದಲ್ಲಿ ಮಾಡಿದ ಪೋಸ್ಟ್ ಗೆ ಆಥಿಯಾ ರಿಪ್ಲೈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೆಳೆಯರೊಂದಿಗೆ ಕಾರ್ಡ್ ಆಡುವದನ್ನ ಮಿಸ್ ಮಾಡಿಕೊಂಡಿರುವ ಕುರಿತು ರಾಹುಲ್ ಪೋಸ್ಟ್ ಮಾಡಿದ್ದರು. ಕೈಯಲ್ಲಿ ಕಾರ್ಡ್ ಹಿಡಿದು ಯೋಚನೆ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಪೋಸ್ಟ್ ನ್ನು ಆಥಿಯಾ ಸೇರಿದಂತೆ ಕೆಲ ಗೆಳೆಯರಿಗೆ ಟ್ಯಾಗ್ ಮಾಡಿದ್ದರು.
View this post on Instagram
ಕೆ.ಎಲ್.ರಾಹುಲ್ ಪೋಸ್ಟ್ ಗೆ ‘ಗ್ರೇಟ್ ಕಾರ್ಡ್ಸ್ ‘ ಎಂದು ಆಥಿಯಾ ಕಮೆಂಟ್ ಮಾಡಿದ್ದಾರೆ. ಸದ್ಯ ಆಥಿಯಾ ಕಮೆಂಟ್ ಸಾಕಷ್ಟು ವೈರಲ್ ಆಗುತ್ತಿದೆ.
ಆಥಿಯಾ ಶೆಟ್ಟಿ ಹುಟ್ಟುಹಬ್ಬದ ದಿನದಂದು ಗೆಳತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಕೆ.ಎಲ್.ರಾಹುಲ್ ಹುಚ್ಚು ಹುಡುಗಿ ಎಂದು ಬರೆದುಕೊಂಡು ವಿಶ್ ಮಾಡಿದ್ದರು. ಇಬ್ಬರ ಕ್ಯೂಟ್ ಫೋಟೋ ಮಿಂಚಿನಂತೆ ಬಾಲಿವುಡ್, ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡಿತ್ತು.
ಕೆ.ಎಲ್.ರಾಹುಲ್ ಮತ್ತು ಆಥಿಯಾ ಶೆಟ್ಟಿ ಪ್ರೇಮ ಬಂಧನದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಹರಿದಾಡುತ್ತಿದೆ. ಆದ್ರೆ ಇದುವರೆಗೂ ಇಬ್ರೂ ಈ ಬಗ್ಗೆ ಮಾತನಾಡಿಲ್ಲ. ಒಬ್ಬರನೊಬ್ಬರ ಹುಟ್ಟುಹಬಕ್ಕೆ ವಿಶ್ ಮಾಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ.
View this post on Instagram