ಮುಂಬೈ: ರೋಹಿತ್ ಶರ್ಮಾ ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಸಾಧಿಸಿದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಸಮಿತಿ ಪರಿಗಣಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಬ್ರೇಕ್ ಬಳಿಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲಿದೆ. ಆದರೆ ಈ ಟೂರ್ನಿಗೆ ರೋಹಿತ್ ಶರ್ಮಾರನ್ನು ಆಯ್ಕೆ ಮಾಡದಿರುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. 2 ತಿಂಗಳ ಕಾಲ ನಡೆಯುವ ಟೂರ್ನಿಗೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಿಟ್‍ಮ್ಯಾನ್ ರೋಹಿತ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಪರಿಗಣಸಿರಲಿಲ್ಲ.
Advertisement
Advertisement
2020ರ ಐಪಿಎಲ್ ಟೂರ್ನಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಬಲ್ ಸೂಪರ್ ಓವರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಸೀಸ್ ಟೂರ್ನಿಗೆ ರೋಹಿತ್ ಶರ್ಮಾ ಆಸೀಸ್ ಟೂರ್ನಿಗೆ ಲಭ್ಯರಾಗುತ್ತಾರಾ ಎಂಬ ಬಗ್ಗೆ ಗಂಗೂಲಿ ಮಾಧ್ಯಮವೊಂದರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಶರ್ಮಾರೊಂದಿಗೆ ಇಶಾಂತ್ ಶರ್ಮಾ ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಸಾಧಿಸಿದರೆ ಆಸೀಸ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿ ಪರಿಗಣಿಸುತ್ತದೆ. ಇಬ್ಬರ ಗಾಯದ ಸಮಸ್ಯೆ ಸ್ವತಃ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ. ಆಸೀಸ್ ತಂಡಕ್ಕೆ ವಾರ್ನರ್, ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಕಮ್‍ಬ್ಯಾಕ್ ಮಾಡಿದ್ದು ಹೆಚ್ಚಿನ ಬಲ ನೀಡಿದೆ. ಅವರನ್ನು ಎದುರಿಸುವ ಶಕ್ತಿ ಭಾರತದ ಆಟಗಾರರಿಗೆ ಇದೆ. ಆಸೀಸ್ ಬ್ಯಾಟಿಂಗ್ ಲೈನ್‍ಅಪ್‍ಗೆ ಸವಾಲು ನೀಡಲು ಬುಮ್ರಾ, ಶಮಿ, ಸೈನಿರೊಂದಿಗೆ ವೇಗದ ಬೌಲರ್‌ಗಳು ಸಮರ್ಥರಾಗಿದ್ದಾರೆ.
Advertisement
ಟೂರ್ನಿಯಲ್ಲಿ ಎರಡು ತಂಡಗಳ ಗೆಲುವಿಗೂ 50-50 ಅವಕಾಶವಿದೆ. ಆಸೀಸ್ ಟೂರ್ನಿಯಲ್ಲಿ ಇತ್ತಂಡಗಳು ಹೆಚ್ಚು ರನ್ ಗಳಿಸುವುದು ಮುಖ್ಯ. ಯಾರು ಹೆಚ್ಚು ರನ್ ಗಳಿಸುತ್ತಾರೋ ಅವರಿಗೆ ಗೆಲುವು ಲಭ್ಯವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್ 2020ರ ಟೂರ್ನಿ ಮುಕ್ತಾಯವಾದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ನ.12 ರಂದು ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿದೆ. ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಾಲ್ಕು ಟೆಸ್ಟ್ ಪಂದ್ಯ, ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿದೆ.