ನವದೆಹಲಿ: ಆಸ್ಟ್ರೇಲಿಯಾದಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳುಹಿಸಿದ ದೀಪಾವಳಿ ಸಂದೇಶಕ್ಕೆ ಇಂಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಸದ್ಯ ಟೀಂ ಇಂಡಿಯಾ ಆಸೀಸ್ ಪ್ರವಾಸಕ್ಕೆ ಆಸ್ಟ್ರೇಲಿಯಾಗೆ ತೆರಳಿದೆ. ಐಪಿಎಲ್ ಮುಗಿದ ನಂತರ ನೇರವಾಗಿ ಕೊಹ್ಲಿ ಪಡೆ ಆಸೀಸ್‍ಗೆ ಹಾರಿದೆ. ಈ ನಡುವೆ ದೀಪಾವಳಿ ಹಬ್ಬದ ಸಲುವಾಗಿ ತನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯವರು ಪಟಾಕಿ ಸಿಡಿಸದೇ ಶಾಂತಿಯುತವಾದ ದೀಪಾವಳಿ ಆಚರಿಸಿ ಎಂದು ಟ್ವಿಟ್ಟರ್ ಸಂದೇಶ ರವಾನೆ ಮಾಡಿದ್ದರು.
Advertisement
Happy Diwali ???????? pic.twitter.com/USLnZnMwzT
— Virat Kohli (@imVkohli) November 14, 2020
Advertisement
ವಿರಾಟ್ ಕೊಹ್ಲಿಯವರ ಈ ಮಾತಿಗೆ ಕೆಲ ಭಾರತೀಯರು ಟ್ವಿಟ್ಟರಿನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ನವೆಂಬರ್ 5ರಂದು ಯುಎಇನಲ್ಲಿ ನಡೆದ ವಿರಾಟ್ ಕೊಹ್ಲಿ ಹುಟ್ಟುಹಬ್ಬದಂದು ಪಟಾಕಿ ಸಿಡಿಸಲಾಗಿತ್ತು ಈ ಫೋಟೋವನ್ನು ಬಳಸಿಕೊಂಡು ಕೊಹ್ಲಿಯವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದರ ಮಧ್ಯೆ ಅನುಷ್ಕಾ ಶರ್ಮಾ ಅವರನ್ನು ಎಳೆದು ತಂದು ಪಟಾಕಿಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.
Advertisement
https://twitter.com/ur_voiceAkash/status/1327935006539321344
Advertisement
ಕೊಹ್ಲಿ ಸಂದೇಶವೇನು?
ಶನಿವಾರ ತಮ್ಮ ಟ್ವಿಟ್ಟರಿನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ, ನನ್ನ ಕಡೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ಜೊತೆಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಯನ್ನು ಸಿಡಿಸಬೇಡಿ. ಪರಿಸರವನ್ನು ಸಂರಕ್ಷಿಸಿ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಜೊತೆ ಮನೆಯಲ್ಲೇ ದೀಪಾವಳಿಯನ್ನು ಆಚರಿಸಿ ಎಂದು ಕೇಳಿಕೊಂಡಿದ್ದರು.
ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಅಡಿಲೇಡ್‍ನಲ್ಲಿ ಆಡಲಿರುವ ಡೇ/ನೈಟ್ ಪಂದ್ಯದ ನಂತರ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.