ಹೈದರಾಬಾದ್: ಮದುವೆಯಾಗಿ ಗಂಡನ ಮನೆಗೆ ಸೇರಿರುವ ತಮ್ಮ ಮಗಳಿಗೆ ತಂದೆಯೊಬ್ಬ ಆಷಾಢ ಮಾಸಕ್ಕೆ ವಿಭಿನ್ನವಾದ ಗಿಫ್ಟ್ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ಆಂಧ್ರಪ್ರದೇಶದ ಬಟುಲಾ ಬಲರಾಮ ಕೃಷ್ಣ ಅವರು ತಮ್ಮ ಮಗಳಿಗೆ ಆಷಾಢ ಮಾಸ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನು, ಉಪ್ಪಿನಕಾಯಿ, ತರಕಾರಿಗಳು ಮತ್ತು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿದರು. ಹೊಸದಾಗಿ ಮದುವೆಯಾದ ಮಗಳಿಗೆ ಬಲರಾಮ ಕೃಷ್ಣ ವಿಭಿನ್ನವಾಗಿ ಉಡುಗೊರೆ ನೀಡಿದ್ದಾರೆ. ಇವರು ಪ್ರಮುಖ ಉದ್ಯಮಿಯಾಗಿದ್ದು, ರಾಜಮಂಡ್ರಿ ಮೂಲದವರಾಗಿದ್ದಾರೆ ಇದನ್ನೂ ಓದಿ: ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ
Advertisement
Advertisement
ಅಂಧ್ರಪ್ರದೇಶದ ರಾಮಕೃಷ್ಣ ಅವರು ತಮ್ಮ ಮಗಳಿಗೆ ಬರೋಬ್ಬರಿ 1000 ಕೆ.ಜಿ ಮೀನು, 1000 ಕೆ.ಜಿ ತರಕಾರಿ, 250 ಕೆ.ಜಿ ಸಿಗಡಿ ಹಾಗೂ 250 ಕೆಜಿ ಕಿರಾಣಿ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ 250 ಜಾರ್ ಉಪ್ಪಿನಕಾಯಿ, 50 ಕೆ.ಜಿ ಚಿಕನ್, 10 ಕುರಿಗಳನ್ನು ಮತ್ತು 250 ಕೆ.ಜಿ ಸಿಹಿ ತಿಂಡಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಸ್ಪೆಷಲ್ ಕೇಕ್ ಚಪ್ಪರಿಸಿ ತಿಂದು ಅಜಯ್ ಪತ್ನಿಗೆ ರಚಿತಾ ಧನ್ಯವಾದ
Advertisement
ವಧುವಿನ ಕುಟುಂಬವು ತಮ್ಮ ಮಗಳಿಗೆ ಹೊಸ ಜೀವನವನ್ನು ಆರಂಭಿಸಲು ಸಾಧ್ಯವಾದಷ್ಟು ಎಲ್ಲವನ್ನೂ ಒದಗಿಸುತ್ತಾರೆ. ಆದರೆ ಈ ಪೋಷಕರು ಮಾತ್ರ ಮಗಳ ಜೀವನಕ್ಕೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ದಿನ ಬಳಕೆಯ ವಸ್ತುವನ್ನು ಉಡುಗೊರೆಯಾಗಿ ನೀಡಿದ್ದಾರೆ. ನವವಿವಾಹಿತರಿಗೆ ಹಣ, ಕಲಾಕೃತಿ, ಆಭರಣ, ಮನೆ, ಕಾರು ನೀಡುವ ಪೋಷಕರ ಮಧ್ಯೆ ಇವರು ವಿಶೇಷವಾಗಿ ಮಗಳಿಗೆ ಮೀನು, ತರಕಾರಿ, ಕುರಿ ಮುಂತಾದವುಗಳನ್ನು ನೀಡಿದ್ದಾರೆ.
ರಾಮಕೃಷ್ಣ ಅವರ ಮಗಳು ಪ್ರತ್ಯೂಷಾ ಹಾಗೂ ಆಕೆಯ ಪತಿ ಪವನ್ ಕುಮಾರ್ ಮಾವ ಟ್ರಕ್‍ನಲ್ಲಿ ತುಂಬಿ ಕಳುಹಿಸಿರುವ ಊಡುಗೊರೆಯನ್ನು ನೋಡಿ ಶಾಕ್ ಆಗಿದ್ದಾರೆ.