ಮುಂಬೈ: ಶೂಟಿಂಗ್ ವೇಳೆ ಆಶಿಕಿ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್ ಆಗಿ ಮಾತನಾಡುವ ಸಾಮರ್ಥ್ಯ ವನ್ನು ಕಳೆದುಕೊಂಡಿದ್ದಾರೆ.
ಆಶಿಕಿ ಖ್ಯಾತಿಯ ನಟ ರಾಹುಲ್ ರಾಯ್ ಶೂಟಿಂಗ್ ಸಮಯದಲ್ಲಿ ಬ್ರೇನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಅವರು ನಟಿಸುತ್ತಿರುವ 2021ರ ಬಹುನೀರಿಕ್ಷೆಯ ಹೊಸ ಸಿನಿಮಾ ಎಲ್‍ಎಸಿ-ಲಿವ್ ದ ಬ್ಯಾಟಲ್ ಸಿನಿಮಾದ ಶೂಟಿಂಗ್ ವೇಳೆ ಬ್ರೇನ್ ಸ್ಟ್ರೋಕ್ ಸಂಭವಿಸಿದೆ.
Advertisement
ಕಾರ್ಗಿಲ್‍ನಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿತ್ತು. ಈ ವೇಳೆ ತುಂಬಾ ಚಳಿ ಹಾಗೂ ಹಿಮದ ವಾತಾವರಣ ಇದ್ದ ಕಾರಣ ರಾಹುಲ್ ಬ್ರೇನ್ ಸ್ಟ್ರೋಕ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡ ರಾಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಈ ದುರ್ಘಟನೆ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಶ್ರೀನಗರದಿಂದ ಮುಂಬೈಗೆ ಬಂದು ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಮುಂಬೈನ ನಾನಾವತಿ ಆಸ್ಪತ್ರೆಗ ದಾಖಲಿಸಲಾಗಿದೆ. ರಾಹುಲ್(52)ವರ್ಷವಾಗಿರುವುದರಿಂದ ಕೋವಿಡ್ 19 ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ರಾಹುಲ್ ಸಹೋದರ ರೋಮಿನ್ ಸೇನ್ ಹೇಳಿದ್ದಾರೆ.
Advertisement
ರಾಹುಲ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1990ರ ಹಿಟ್ ಸಿನಿಮಾ ಆಶಿಕಿ ಮೂಲಕ ಬಾಲಿವುಡ್ ಚಿತ್ರರಂರಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ರಾಯ್ ಬಹುಬೇಡಿಕೆಯ ನಟನಾಗಿ ಮಿಂಚಿದ್ದಾರೆ. ಮೊದಲ ಸಿನಿಮಾವೇ ಇವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.