ಬಾಗಲಕೋಟೆ: ಒಂದೇ ರೂಮಿನಲ್ಲಿ ಅಪ್ರಾಪ್ತ ಹುಡುಗಿ ಹಾಗೂ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಬಸವ ನಗರದಲ್ಲಿ ನಡೆದಿದೆ.
23 ವರ್ಷದ ಆನಂದ್ ಹಾಗೂ 15 ವರ್ಷದ ಅಪ್ರಾಪ್ತೆ ನೇಣಿಗೆ ಶರಣಾದ ಪ್ರೇಮಿಗಳು. ಮೃತ ಆನಂದ್ ಮುಧೋಳ ನಗರದ ರನ್ನ ವೃತ್ತದ ಬಳಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ಇಬ್ಬರು ಮುಧೋಳ ತಾಲೂಕಿನಲ್ಲಿರುವ ಒಂದೇ ಗ್ರಾಮದವರು ಎಂದು ತಿಳಿದು ಬಂದಿದೆ.
ಬಸವ ನಗರದ ಬಾಡಿಗೆ ರೂಮಿನಲ್ಲಿ ವಾಸ ಮಾಡುತ್ತಿದ್ದು, ಇದೀಗ ಅದೇ ರೂಮಿನಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಆನಂದ್ ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಆಲ್ ಫ್ರೆಂಡ್ಸ್ ಮಿಸ್ ಯು, ಅವ್ವ ಅಪ್ಪ ಮಿಸ್ ಯು ಎಂದು ಸ್ಟೇಟಸ್ ಹಾಕಿದ್ದಾನೆ.
ಇಬ್ಬರ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಮಾಹಿತಿ ತಿಳಿದು ಮುಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.