ಶಾರ್ಜಾ: ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ನಂತರ ಬೌಲರ್‌ಗಳ ಕಮಾಲ್‍ನಿಂದಾಗಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು 82 ರನ್ ಗಳ ಭರ್ಜರಿ ಗೆಲುವು ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿ ಬೆಂಗಳೂರು ತಂಡದ ನೀಡಿದ್ದ 195 ರನ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಗಳಷ್ಟೇ ಶಕ್ತವಾಯಿತು. ಟೂರ್ನಿಯಲ್ಲಿ ಪ್ರಮುಖ ಗೆಲುವು ಪಡೆದ ಆರ್ ಸಿಬಿ 10 ಅಂಕಗಳೊಂದಿಗೆ 3ನೇ ಪಡೆಯಿತು. ಪಂದ್ಯದಲ್ಲಿ ಸೋಲುಂಡ ಕೆಕೆಆರ್ 8 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಾರಿದೆ.
Advertisement
Advertisement
2013ರ ಬಳಿಕ ಟೂರ್ನಿಯಲ್ಲಿ ಆಡಿದ ಆರಂಭದ 7 ಪಂದ್ಯಗಳಲ್ಲಿ ಮೊದಲ ಬಾರಿಗೆ ಆರ್‌ಸಿಬಿ 5 ರಲ್ಲಿ ಜಯಗಳಿಸಿದೆ. ಕಳೆದ ವರ್ಷ ಆರ್‌ಸಿಬಿ ಮೊದಲ 7 ಪಂದ್ಯವಾಡಿ 1 ಪಂದ್ಯ ಮಾತ್ರ ಗೆದ್ದುಕೊಂಡಿತ್ತು.
Advertisement
195 ರನ್‍ಗಳ ಬೃಹತ್ ರನ್ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಆರಂಭಿಕರಾದ ಗಿಲ್, ಟಾಮ್ ಬ್ಯಾಂಟನ್ ಉತ್ತಮ ಆರಂಭ ನೀಡಲು ವಿಫಲರಾದರು. 4 ಓವರ್ ವೇಳೆಗೆ ಕೆಕೆಆರ್ 23 ರನ್ ಗಳಿಸಿದ್ದ ವೇಳೆ 8 ರನ್ ಗಳಿಸಿದ್ದ ಬ್ಯಾಂಟನ್ ರನೌಟ್ ಆಡುವ ಮೂಲಕ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 9 ರನ್ ಗಳಿಸಿದ್ದ ರಾಣಾ, ಸುಂದರ್‍ಗೆ ವಿಕೆಟ್ ಒಪ್ಪಿಸಿದರು. 51 ರನ್ ಗಳಿಸುವ ವೇಳೆಗೆ ಕೆಕೆಆರ್ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು.
Advertisement
10ನೇ ಓವರ್ ವೇಳೆಗೆ 55 ರನ್ ಗಳಿಸಿದ್ದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್‍ರನ್ನು ರನೌಟ್ ಮೂಲಕ ಕಳೆದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ಕಾರಣವಾಗಿದ್ದ ದಿನೇಶ್ ಕಾರ್ತಿಕ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಬೆಂಗಳೂರು ವಿರುದ್ಧ ಮಿಂಚಲು ವಿಫಲರಾದರು. ಆ ಬಳಿಕ ಯಾವುದೇ ಹಂತದಲ್ಲಿ ಆರ್ ಸಿಬಿ ಬೌಲಿಂಗ್ ಎದುರು ಪ್ರತಿರೋಧ ತೋರಲು ಕೂಡ ವಿಫಲರಾದ ಕೆಕೆಆರ್ ಬ್ಯಾಟ್ಸ್ ಮನ್ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ಮಾರ್ಗನ್ 8, ರಸೇಲ್ 16, ಕಮ್ಮಿನ್ಸ್ 1, ತ್ರಿಪಾಠಿ 16, ನಾಗರ್ಕೋಟಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದದೆ, ವರುಣ್ 7 ರನ್ ಹಾಗೂ ಪ್ರಸಿದ್ಧ ಕೃಷ್ಣ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನಿಗದಿತ 20 ಓವರ್ ಗಳ ಅಂತ್ಯಕ್ಕೆ 9 ವಿಕೆಟ್ ಕಳೆದು ಕೊಂಡು 112 ರನ್ ಗಳಷ್ಟೇ ಶಕ್ತವಾಯಿತು.
ಆರ್ ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೋರಿಸ್ 4 ಓವರ್ ಎಸೆದು 17 ರನ್ ನೀಡಿ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 4 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಚಹಲ್, ಉದಾನ, ಶಿರಾಜ್, ಸೈನಿ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿಗೆ ಆರಂಭಿಕರಾದ ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 50 ರನ್ ಗಳ ಜೊತೆಯಾಟವನ್ನು ನೀಡಿತ್ತು. ಇತ್ತ ಕೊಹ್ಲಿ, ಎಬಿಡಿ ಡೆಲಿಯರ್ಸ್ ಜೋಡಿ ಶತಕ ಜೊತೆಯಾಟವಾಡಿ ನಿಗದಿತ 20 ಓವರ್ ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಲು ಕಾರಣವಾಯಿತು. ಪಂದ್ಯದಲ್ಲಿ ಪಡಿಕ್ಕಲ್ 32 ರನ್, ಫಿಂಚ್ 46 ರನ್ ಗಳಿಸಿದರೆ. 28 ಎಸೆತಗಳಲ್ಲಿ ಕೊಹ್ಲಿ 33 ರನ್, ಎಬಿಡಿ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
That’s that from Sharjah. #RCB win by 82 runs.#Dream11IPL #RCBvKKR pic.twitter.com/wQV7xlQ9Yi
— IndianPremierLeague (@IPL) October 12, 2020