ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ತಂಡದ ಗೀತೆಯನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಕೆಲ ಕನ್ನಡದ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಆಡಲು ಆರ್‌ಸಿಬಿ ತಂಡ ಸಿದ್ಧವಾಗಿದೆ, ಯುಎಇಯಲ್ಲಿ ಅಭ್ಯಾಸ ಮುಗಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲು ಕಾಯುತ್ತಿದೆ. ಇದೇ ಸೆಪ್ಟಂಬರ್ 21ರ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸಂಜೆ 7 ಗಂಟೆಗೆ ಆರ್‌ಸಿಬಿ ಐಪಿಎಲ್-2020ರ ತನ್ನ ಮೊದಲ ಪಂದ್ಯವನ್ನು ಆಡಲಿದೆ.
Advertisement
The Official RCB Anthem is here! And it’s dedicated to the best fans in the world. Time to crank up the volume to the maximum, 12th Man Army. ????????#PlayBold #IPL2020 #WeAreChallengers #Dream11IPL #RCBAnthem pic.twitter.com/zUBMfSM4U5
— Royal Challengers Bangalore (@RCBTweets) September 18, 2020
Advertisement
ಈ ವಿಚಾರಚಾಗಿ ತಮ್ಮದೇ ತಂಡದ ರ‍್ಯಾಪ್ ಗೀತೆಯೊಂದನ್ನು ಆರ್‍ಸಿಬಿ ರಚನೆ ಮಾಡಿದ್ದು, ಇದನ್ನು ಇಂದು ಬೆಳಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಹಾಡಿಗೆ ಕೆಲ ಆರ್‌ಸಿಬಿ ಅಭಿಮಾನಿಗಳು ಮತ್ತು ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಈ ಗೀತೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ: ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡ
Advertisement
ಏನು ಗುರು ಎರಡು line ಅಲ್ಲಿರೋದು ಇಡೀ ಹಾಡಲ್ಲಿ ಇದ್ದಿದ್ರೆ ಇಷ್ಟು ವಿರೋಧ ಬರ್ತಿತ್ತ , ನಮ್ಮ ಹುಡುಗ್ರು ನೀವು ಗೆದ್ದಿಲ್ಲ ಅಂದ್ರು ಪ್ರತಿಬಾರಿ ಈ ಸಲ ಕಪ್ ನಮ್ದೆ ಅಂಥ ಸಾಯೋ ಮಟ್ಟಕ್ಕೆ support ಮಾಡ್ತಾರೆ, ಆದ್ರೆ ನೀವು ನಮಗೆ ತಿಳಿಯದೆ ಇರೋ ನುಡಿಯಲ್ಲಿ anthem ಹಾಡಿದ್ರೆ ಯಾವ ನನ್ನ ಮಗನಿಗೆ support ಮಾಡಬೇಕು ಅನ್ಸುತ್ತೆ ಹೇಳಿ
— Rakshith J Gowda | ರಕ್ಷಿತ್ ಜಯರಾಮ್ (@RAKKI_GOWDA) September 18, 2020
Advertisement
ಈ ಹಾಡಿಗೆ ವಿರೋಧ ವ್ಯಕ್ತಪಡಿಸಿರುವ ಕೆಲವರು, ಇನ್ನೂ ಕನ್ನಡ ಪದಗಳನ್ನು ಬಳಸಬಹುದಿತ್ತು. ಹಿಂದಿ ಹೇರಿಕೆ ಬಗ್ಗೆ ಈಗ ಚರ್ಚೆಯಾಗುತ್ತಿರುವ ಸಮಯದಲ್ಲಿ ಹಿಂದಿಯನ್ನು ಬಳಸಿದ್ದು ಯಾಕೆ? ಚೆನ್ನೈ ತಂಡ ತಮಿಳು ಭಾಷೆಯಲ್ಲಿ ಹಾಡನ್ನು ಬಿಡುಗಡೆ ಮಾಡಿದೆ. ಪಂಜಾಬ್ ತಂಡ ಪಂಜಾಬಿಯಲ್ಲಿ ಗೀತೆ ರಚನೆ ಮಾಡಿದೆ. ಹೀಗಿರುವಾಗ ಕರ್ನಾಟಕದ ತಂಡವಾದ ಆರ್‌ಸಿಬಿ ಯಾಕೆ ಹೆಚ್ಚು ಕನ್ನಡ ಪದಗಳನ್ನು ಬಳಸಿಲ್ಲ. ಅವಶ್ಯಕತೆ ಇಲ್ಲದ ಜಾಗದಲ್ಲಿ ಹಿಂದಿ ಪದಗಳನ್ನು ಬಳಸಲಾಗಿದೆ ಎಂದು ಕಿಡಿಕಾರಿದ್ದಾರೆ.
Ayyo goobe.
Captain of RCB itself is not a Karnataka lad. ABD isn't Indian. Yet, they are the face of RCB – should RCB let them go?
Instead of appreciating that they brought together multiple languages, you find faults.
— LifeAfterFI (@LifeAfterFI) September 18, 2020
ಈಗ ಇದೇ ವಿಷಯಕ್ಕೆ ಪರ ವಿರೋಧ ಟ್ವೀಟ್‍ಗಳು ಬಂದಿದ್ದು, ಕೆಲವರು ಹಿಂದೆ ಭಾಷೆ ಬಳಸಿದ್ದರಲ್ಲಿ ಏನೂ ತಪ್ಪಿದೆ. ತಂಡದಲ್ಲಿ ಆಡುವ ಹಲವಾರು ಆಟಗಾರರು ಬೇರೆ ರಾಜ್ಯದವರು. ಎಬಿಡಿ ಬೇರೆ ದೇಶದವರು. ಹೀಗಿರುವಾಗ ಮಾಡಿರುವ ಹಾಡಿಗೆ ಮೆಚ್ಚುಗೆ ಸೂಚಿಸುವುದನ್ನು ಬಿಟ್ಟು ಯಾಕೆ ವಿರೋಧ ಮಾಡುತ್ತೀರಾ? ಕ್ರೀಡೆಯಲ್ಲಿ ಪ್ರಾದೇಶಿಕತೆ ನೋಡುವುದು ತಪ್ಪು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ: ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು
RCB Anthem ಕನ್ನಡ Rap ft. @devdpd07
ಏನೇ ಬರಲಿ… ಎಂತೇ ಇರಲಿ… RCB! #PlayBold #IPL2020 #ನಮ್ಮRCB #WeAreChallengers #Dream11IPL #RCBAnthem pic.twitter.com/cR9KKfWgvd
— Royal Challengers Bangalore (@RCBTweets) September 18, 2020
ಟ್ವಿಟ್ಟರ್ ನಲ್ಲಿ ವಿರೋಧ ಕಂಡುಬರುತ್ತಿದ್ದಂತೆ ಇನ್ನೊಂದು ಟ್ವೀಟ್ ಮಾಡಿರುವ ಆರ್‌ಸಿಬಿ ತಂಡ ಕನ್ನಡ ಗೀತೆ, “ಏನೇ ಬರಲಿ ಎಂತೇ ಇರಲಿ ಆರ್‌ಸಿಬಿ” ಎಂದು ಬರೆದುಕೊಂಡಿದೆ. ಆದರೆ ಕೆಲ ಅಭಿಮಾನಿಗಳು ಆರ್‌ಸಿಬಿ ತಂಡ ಟ್ವಿಟ್ಟರ್ ಆಡ್ಮಿನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ನಾವು ಮಾಡುವ ಕೆಲ ಟ್ವೀಟ್‍ಗಳನ್ನು ನೀವು ಯಾಕೆ ಹೈಡ್ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾಳೆಯಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ತಂಡ ಮುಖಾಮುಖಿಯಾಗಲಿವೆ.