ಬೆಂಗಳೂರು: ಐಪಿಎಲ್‍ನಲ್ಲಿ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಆರ್‌ಸಿಬಿ. ಪ್ರತಿ ಬಾರಿ ಕಪ್ ಗೆಲ್ಲಲು ವಿಫಲವಾದರು ಕೂಡ ಅಭಿಮಾನಿಗಳ ಹೃದಯ ಮಾತ್ರ ಗೆಲ್ಲುತ್ತದೆ. ಇದೀಗ ಆರ್‌ಸಿಬಿಯ ಕಟ್ಟ ಅಭಿಮಾನಿ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಆರ್‌ಸಿಬಿ ತಂಡಕ್ಕೆ ಹುರಿದುಂಬಿಸಿದ್ದಾರೆ.
ಐಪಿಎಲ್‍ನ 13 ಆವೃತ್ತಿಗಳಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿರುವ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ. 14ನೇ ಆವೃತ್ತಿಯ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಹೊಸ ಹುರುಪಿನೊಂದಿಗಿದೆ. ಆರ್‌ಸಿಬಿ ಇಂದು ಹೈದರಾಬಾದ್ ತಂಡದ ವಿರುದ್ಧ ಎರಡನೇ ಪಂದ್ಯವಾಡುತ್ತಿದ್ದು, ಈ ಪಂದ್ಯಕ್ಕೂ ಮೊದಲು ಇಂಗ್ಲೆಂಡ್ ಆಟಗಾರ್ತಿ ತಂಡಕ್ಕೆ ‘ಈ ಸಲ ಕಪ್ ನಮ್ದೇ’ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿಕೊಂಡಿದ್ದಾರೆ.
ಈ ಸಲ ಕಪ್ ನಮ್ದೇ ❤️
— Alexandra Hartley (@AlexHartley93) April 14, 2021
ಅದರಲ್ಲೂ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡದಲ್ಲೇ ಟ್ವೀಟ್ ಮಾಡಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದು, ಅವರ ಟ್ವೀಟ್ ಅನ್ನು ಸಾವಿರಾರು ಜನ ಲೈಕ್ ಮತ್ತು ರೀಟ್ವೀಟ್ ಮಾಡಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಒಂದು ಟ್ವೀಟ್‍ನಿಂದಾಗಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡಿಗರ ಮನಗೆದ್ದಿದ್ದಾರೆ.