ಆರ್‌ಆರ್‌ ನಗರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್

Public TV
1 Min Read
rr nagar jds candidate krishnamurthy

– ಕಳೆದ ಬಾರಿ 60 ಸಾವಿರ ಮತ ಪಡೆದಿದ್ದ ಅಭ್ಯರ್ಥಿ

ಬೆಂಗಳೂರು: ರಾಜರಾಜೇಶ್ವರಿ ಉಪ ಚುನಾವಣೆಯಲ್ಲಿ ಜೆಡಿಎಸ್ ಈ ಬಾರಿ ಹೀನಾಯವಾಗಿ ಸೋಲನುಭವಿಸಿದ್ದು, ಠೇವಣಿಯನ್ನು ಕಳೆದುಕೊಂಡಿದೆ.

jds

ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‍ನ ಕುಸುಮಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10,251 ಮತಗಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್ 60 ಸಾವಿರ ಮತಗಳನ್ನು ಪಡೆದಿತ್ತು. ಆದರೆ ಈ   ಬಾರಿ ಇದರ ಅರ್ಧದಷ್ಟು ಮತಗಳನ್ನು ಸಹ ಜೆಡಿಎಸ್ ಅಭ್ಯರ್ಥಿ ಪಡೆದಿಲ್ಲ. ಒಟ್ಟು 57,936 ಮತಗಳ ಅಂತರದಿಂದ ಮುನಿರತ್ನ ಈ ಚುನಾವಣೆಯನ್ನು ಗೆದ್ದಿದ್ದಾರೆ.

ಚಲಾವಣೆಯಾದ ಒಟ್ಟು ಮತಗಳ ಪೈಕಿ 6ನೇ 1 ಭಾಗದಷ್ಟು ಮತಗಳನ್ನು ಪಡೆದರೆ ಠೇವಣಿ ಉಳಿಸಿಕೊಂಡಂತೆ. ಈ ಬಾರಿ ಒಟ್ಟು 2,09,828 ಮತಗಳು ಚಲಾವಣೆಯಗಿದ್ದು, ಇದರ ಒಂದು ಭಾಗ ಎಂದರೆ 34,971 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಪಡೆಯಬೇಕಿತ್ತು. ಆದರೆ 24ನೇ ಸುತ್ತಿಗೆ ಜೆಡಿಎಸ್ ಪಡೆದ ಮತ ಕೇವಲ 10,197. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋಲನುಭವಿಸಿದಂತಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *