ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿ ಇರುವವರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪರಿಹಾರವನ್ನು ಸಂಕಷ್ಟದಲ್ಲಿದ್ದವರು ಬದುಕಿರುವಾಗಲೇ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ @BSYBJP ಅವರೇ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳು, ಆಟೋರಿಕ್ಷಾ, ಕ್ಯಾಬ್ ಚಾಲಕರ ನೋಂದಣಿ ಗೊಂದಲ ತಕ್ಷಣ ಬಗೆಹರಿಸಿ. ಅವರು ಬದುಕಿದ್ದಾಗಲೇ ಮಾಸಿಕ 10,000 ರುಪಾಯಿ ಪರಿಹಾರ ನೀಡಿ.
ಜಿಮ್, ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡಿ.
— DK Shivakumar (@DKShivakumar) May 18, 2020
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಮುಖ್ಯಮಂತ್ರಿ ಬಿಎಸ್‍ವೈ ಅವರೇ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳು, ಆಟೋರಿಕ್ಷಾ, ಕ್ಯಾಬ್ ಚಾಲಕರ ನೋಂದಣಿ ಗೊಂದಲ ತಕ್ಷಣ ಬಗೆಹರಿಸಿ. ಅವರು ಬದುಕಿದ್ದಾಗಲೇ ಮಾಸಿಕ 10,000 ರೂಪಾಯಿ ಪರಿಹಾರ ನೀಡಿ. ಹಾಗೆಯೇ ಜಿಮ್, ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡಿ ಎಂದು ಬರೆದುಕೊಂಡು ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ.
Advertisement
Advertisement
ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ, ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಕೇಂದ್ರ ಸ್ಪಂದಿಸಿದ್ದು 5 ಸಾವಿರ ಕೊಟಿ ರೂ. ಸಾಲ ನೀಡಲಾಗುವುದು. ಒಂದು ತಿಂಗಳಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಾಗುವುದು. ಸಾಲ ಪಡೆದ ವ್ಯಾಪಾರಸ್ಥರು ಡಿಜಿಟಲ್ ಮೂಲಕ ವ್ಯವಹರಿಸಿದ್ರೆ ಹೆಚ್ಚು ಲಾಭ ಸಿಗಲಿದೆ. ಇದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಮುಂದಿನ 1 ತಿಂಗಳ ಒಳಗಡೆ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡಲು ವಿಶೇಷ ಯೋಜನೆಯನ್ನು ತರಲಾಗುವುದು. ಕನಿಷ್ಟ 10 ಸಾವಿರ ರೂ. ಬಂಡವಾಳ ಹೂಡುವ ಬೀದಿ ಬದಿಯ ವ್ಯಾಪಾರಿಗಳಿಗೆ ಇದು ನೆರವು ನೀಡಲಿದೆ ಎಂದು ಹೇಳಿದ್ದರು.